ಬೆಂಗಳೂರು: ಮೆಹಬೂಬ್ ಪಾಷಾ ಸೇರಿದಂತೆ ಐದು ಮಂದಿ ಶಂಕಿತ ಉಗ್ರರನ್ನು, ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು . ಇದೀಗ ಆ ಐವರನ್ನು ಎನ್ಐಎ ವಶಕ್ಕೆ ಪಡೆದು ತನಿಖೆ ನಡೆಸಲು ಮುಂದಾಗಿದೆ. ರಾಜ್ಯಮಟ್ಟದ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಎನ್ಐಎ ಸಿದ್ದತೆ ನಡೆಸಿದೆ.
ಶಂಕಿತ ಉಗ್ರರ ಬಂಧನ ಪ್ರಕರಣ: ಸಿಸಿಬಿಯಿಂದ ಎನ್ಐಎಗೆ ಹಸ್ತಾಂತರ..? - ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಉಗ್ರರ ಬಂಧನ
ಮೆಹಬೂಬ್ ಪಾಷಾ ಸೇರಿದಂತೆ ಐದು ಮಂದಿ ಶಂಕಿತ ಉಗ್ರರನ್ನು, ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು . ಇದೀಗ ಆ ಐವರನ್ನು ಎನ್ಐಎ ವಶಕ್ಕೆ ಪಡೆದು ತನಿಖೆ ನಡೆಸಲು ಮುಂದಾಗಿದೆ.
ಸೋಮವಾರ ಕೋರ್ಟ್ನಿಂದ ಅನುಮತಿ ಪಡೆದು, ಎನ್ಐಎ ತಮ್ಮ ವಶಕ್ಕೆ ಪಡೆಯಲಿದೆ. ಇನ್ನು ಈ ಶಂಕಿತ ಉಗ್ರರಿಗೆ ಐಸಿಸ್ ಉಗ್ರ ಸಂಘಟನೆಯ ಲಿಂಕ್ ಇರೋ ಹಿನ್ನೆಲೆ, ಎನ್ಐಎ ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದೆ.
ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ ಮೆಹಾಬೂಬ್ ಪಾಷಾ, ಬೆಂಗಳೂರು ಜಿಹಾದಿ ಗ್ಯಾಂಗ್ನ ಕಮಾಂಡರ್ ಆಗಿದ್ದ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು ಹೊಂಚು ಹಾಕಿದ್ದ. ಇದಕ್ಕಾಗಿ ಸದಸ್ಯರ ನೇಮಕ ಹಾಗೂ ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿ, ಬೆಂಗಳೂರು ಹೊರವಲಯ ಹಾಗೂ ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ಮಾಡ್ತಿದ್ದ. ಹೀಗಾಗಿ ಈತನ ಜೊತೆಯಿದ್ದ ಒಟ್ಟು ಐವರನ್ನು ಸಿಸಿಬಿ ವಶಕ್ಕೆ ಪಡೆದಿತ್ತು.