ಬೆಂಗಳೂರು:ಸಿಡಿ ಪ್ರಕರಣ ಹಿನ್ನೆೆಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆೆಸ್ ಘಟಕದಿಂದ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಲಾಯಿತು.
ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್, ಯುವ ಕಾಂಗ್ರೆೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಕಾರ್ಯಕರ್ತರು ಧರಣಿ ನಡೆಸಿದರು. ರಮೇಶ್ ಜಾರಕಿಹೊಳಿ ಬಂಧನಕ್ಕೆೆ ಆಗ್ರಹಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೊಹಮದ್ ನಲಪಾಡ್, ಪೊಲೀಸರು ರಮೇಶ್ ಜಾರಕಿಹೊಳಿ ನಿವಾಸದ ಎದುರು ರಕ್ಷಣೆ ಕೊಡುತ್ತಾರೆ. ಇಡೀ ಪೊಲೀಸ್ ಇಲಾಖೆ ಅವರ ಕೈಗೊಂಬೆಯಂತೆ ಆಡುತ್ತಿದೆ. ನಮ್ಮ ನಾಯಕರ ವಿರುದ್ಧ ಹೇಳಿರುವ ಮಾತು ಖಂಡನೀಯ. ಆ ರೀತಿಯಲ್ಲಿ ಇರುವುದು ಯಾರು? ನೀವು ಅಲ್ವಾ? ಬಾಹುಬಲಿ ಸಿನಿಮಾದಲ್ಲೇ ಈ ರೀತಿಯಲ್ಲಿ ಇರುವಂಥ ಎಡಿಟಿಂಗ್ ಮಾಡಲಾಗಿಲ್ಲ. ಆದರೆ, ಇದನ್ನೇ ನೀವು ಎಡಿಟಿಂಗ್ ಅಂತಾ ಹೇಳುತ್ತಿದ್ದೀರಿ. ನಾವು ಅಷ್ಟು ಕಾಮನ್‌ಸೆನ್ಸ್ ಇಲ್ಲದವರಾ? ಎಂದು ಕಿಡಿಕಾರಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸ್ವ-ಇಚ್ಛೆೆಯಿಂದ ಘಟನೆ ನಡೆದಿದೆಯೇ ಹೊರತು, ನಮ್ಮ ನಾಯಕರು ಅವರನ್ನು ಕರೆದುಕೊಂಡು ಹೋಗಿ ಬಟ್ಟೆೆ ಬಿಚ್ಚಿ ಬಂದಿದ್ದರಾ? ಅಂಥ ಯಾವುದೇ ಘಟನೆ ನಡೆದಿಲ್ಲ. ಸಂತ್ರಸ್ತೆೆ ಹೇಳಿಕೆ ಹಿನ್ನೆೆಲೆ ಬಂಧನ ಮಾಡುವುದನ್ನು ಬಿಟ್ಟು ಹೇಳಿಕೆ ಕೊಡಲು ಅವಕಾಶ ನೀಡಿದರೆ, ನಮ್ಮ ವಾಹನಗಳ ಮೇಲೆ ಹಲ್ಲೆ ಮಾಡಿದರೆ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಯುವ ಕಾಂಗ್ರೆೆಸ್ ವತಿಯಿಂದ ಉಗ್ರವಾದ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.