ಬೆಂಗಳೂರು: ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಪ್ರೇಮಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ನಿವಾಸಿಗಳಾದ ಉಷಾ ಮತ್ತು ಸುರೇಶ್ ಬಾಬು ಬಂಧಿತ ಅರೋಪಿಗಳು. ಬಂಧಿತ ಆರೋಪಿಗಳು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇಬ್ಬರು ಪ್ರೇಮಿಗಳಾಗಿದ್ದು, ಮುಂದಿನ ತಿಂಗಳು ಎಂಗೇಜ್ ಮೆಂಟ್ ಸಹ ನಿಗದಿಯಾಗಿತ್ತು. ಆರೋಪಿ ಸುರೇಶ್ ಏರಿಯಾದಲ್ಲಿರುವ ಲಾಡ್ಜ್ಗೆ ಆಗಾಗ ಹೋಗಿಬರುತ್ತಿದ್ದ. ಈ ವೇಳೆ ಉಷಾಳ ಸಂಬಂಧಿಕ ಮಹಿಳೆಯು ತನ್ನ ಸ್ನೇಹಿತನ ಜೊತೆ ಲಾಡ್ಜ್ ಬಂದು ಹೋಗುತ್ತಿರುವ ಬಗ್ಗೆ ಇವರಿಬ್ಬರೂ ಗಮನಿಸಿದ್ದಾರೆ.
ನಂತರ ಇಬ್ಬರು ಸೇರಿ ಪ್ಲ್ಯಾನ್ ಮಾಡಿಕೊಂಡು ಅವರು ಬರುತ್ತಿದ್ದ ಕೋಣೆಗೆ ರಹಸ್ಯವಾಗಿ ಕ್ಯಾಮರಾ ಇಟ್ಟಿದ್ದಾರೆ. ಜುಲೈ 15 ರಂದು ದೂರುದಾರ ಮಹಿಳೆ ಹಾಗೂ ಆಕೆಯ ಸ್ನೇಹಿತ ಲಾಡ್ಜ್ ಗೆ ಬಂದು ಖಾಸಗಿ ಕ್ಷಣ ಕಳೆದಿದ್ದಾರೆ.