ಬೆಂಗಳೂರು: ಗೋವಿಂದಪುರ ಪೊಲೀಸರು ಕಾರ್ಯಾಚರಣೆ ಎಕ್ಸ್ಟಾಸಿ ಎಂಬ ಮತ್ತು ಬರುವ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿ 15 ಲಕ್ಷ ಮೌಲ್ಯದ 403 ಟ್ಯಾಬ್ಲೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಗೆ ಮತ್ತು ವಿವಿಧ ಕಾಲೇಜ್ ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ ಹಾಗೂ ತನ್ನದೇ ಆದ ಗಿರಾಕಿಗಳಿಗೆ ಎಕ್ಸ್ಟಾಸಿ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು.
ಈ ಹಿನ್ನೆಲೆಯಲ್ಲಿ ಹೆಚ್.ಬಿ.ಆರ್ ಲೇಔಟ್‌ನ 5ನೇ ಬ್ಲಾಕ್, 5ನೇ ಕ್ರಾಸ್ ನಲ್ಲಿ ವಿದೇಶಿ ಪ್ರಜೆಯನ್ನು ವಿಚಾರಣೆ ನೆಡೆಸಿದ್ದರು. ಆ ಸಮಯದಲ್ಲಿ 15,50,000 ರೂ ಬೆಲೆಯ ವಿವಿಧ ಬಣ್ಣದ ವಿವಿಧ ನಮೂನೆಯ 403 ಎಕ್ಸ್ಟಾಸಿ ಟ್ಯಾಬ್ಲೆಟ್‌ಗಳು ಮತ್ತು ಒಂದು ಮೊಬೈಲ್ ಪೋನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.