ಬೆಂಗಳೂರು : ಮಾದಕ ಸೇವನೆ ಮಾಡುತ್ತಿದ್ದ ಆರೋಪಿ ನೀಡಿದ ಮಾಹಿತಿಯ ಮೇರೆಗೆ ಅಂತಾರಾಜ್ಯ ತಂಡದ ಮೇಲೆ ಕಾರ್ಯಾಚರಣೆ ನಡೆಸಿದ ಜಯನಗರ ಠಾಣಾ ಪೊಲೀಸರು ಇಬ್ಬರು ಕುಖ್ಯಾತ ಮಾದಕ ಸರಬರಾಜುಗಾರರನ್ನು ಬಂಧಿಸಿದ್ದಾರೆ. ಸಾಗರ್ ಸಾಹೋ ಹಾಗೂ ಶೇಷಗಿರಿ ಬಂಧಿತ ಆರೋಪಿಗಳು.
ಇತ್ತೀಚಿಗೆ ಗಾಂಜಾ ಸೇವನೆ ಪ್ರಕರಣದಲ್ಲಿ ಜಯನಗರ ಠಾಣಾ ಪೊಲೀಸರು ನಯಾಜ್ ಪಾಷಾ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ನಗರಕ್ಕೆ ಗಾಂಜಾ ಹಾಗೂ ಹ್ಯಾಶಿಸ್ ಆಯಿಲ್ ಸರಬರಾಜಾಗುತ್ತಿದ್ದ ಬಗ್ಗೆ ಆರೋಪಿ ನಯಾಜ್ ಮಾಹಿತಿ ನೀಡಿದ್ದ.