ಬೆಂಗಳೂರು: ಅಸ್ಸೋಂ ಮೂಲದ ಖತರ್ನಾಕ್ ಸೆಕ್ಯೂರಿಟಿ ಗಾರ್ಡ್ಗಳ ಬಂಧನ ಮಾಡುವಲ್ಲಿ ಹೆಚ್.ಎ.ಎಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಓವರ್ ಡ್ಯೂಟಿ ಮಾಡಿದ್ರೂ ಕೇಳಲಿಲ್ಲ ಸಂಬಳ.. ನಂಬಿಕಸ್ಥರು ಎಂದು ತಿಳಿದ ಮಾಲೀಕನಿಗೆ ಸೆಕ್ಯೂರಿಟಿಗಳಿಂದ ಗುನ್ನ - Detention of Assam accuseds by HAL police
ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಸೆಕ್ಯೂರಿಟಿಗಳಾಗಿ ಕೆಲಸಕ್ಕೆ ಸೇರಿ, ಕೆಲಸದ ಅವಧಿ ಮುಗಿದರು ಕೂಡ ಮನೆಗೆ ತೆರಳದೆ ಓವರ್ ಡ್ಯೂಟಿ ಮಾಡಿ ಅದಕ್ಕೆ ಸಂಬಳವನ್ನೂ ಕೇಳದೇ ಕಂಪನಿಗೆ ಹಾಗೂ ಮಾಲೀಕನಿಗೆ ನಂಬಿಕೆ ಬರುವಂತೆ ಮಾಡುತ್ತಿದ್ದರಂತೆ.
ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಬಂಧಿತ ಆರೋಪಿಗಳು. ಇವರು ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಸೆಕ್ಯೂರಿಟಿಗಳಾಗಿ ಕೆಲಸಕ್ಕೆ ಸೇರಿ, ಕೆಲಸದ ಅವಧಿ ಮುಗಿದರು ಕೂಡ ಮನೆಗೆ ತೆರಳದೆ ಓವರ್ ಡ್ಯೂಟಿ ಮಾಡಿ ಅದಕ್ಕೆ ಸಂಬಳವನ್ನೂ ಕೇಳದೆ ಕಂಪನಿಗೆ ಹಾಗೂ ಮಾಲೀಕನಿಗೆ ನಂಬಿಕೆ ಬರುವಂತೆ ಮಾಡುತ್ತಿದ್ದರಂತೆ.
ಇತ್ತೀಚೆಗೆ ಹೆಚ್.ಎ.ಎಲ್ ಬಳಿಯ ಹೊಂಬಾಳೆ ಕನ್ಸ್ಟ್ರಕ್ಷನ್ ಹಾಗೂ ಕಷ್ಯಪ್ ಗ್ರೂಪ್ ಕಂಪನಿಯಲ್ಲಿ ಸೆಕ್ಯುರಿಟಿಯಾಗಿ ಸೇರಿದ್ದ ಇವರು, ಮಾಲೀಕನ ನಂಬಿಕೆ ಗಳಿಸಿದ್ದರು. ಆದರೆ ಈ ನಂಬಿಕೆಯನ್ನೇ ದುರುಪಯೋಗ ಮಾಡಿಕೊಂಡು ಕಟ್ಟಡದಲ್ಲಿನ 18 ಟನ್ ಕಬ್ಬಿಣವನ್ನು ರಾತ್ರಿವೇಳೆ ಲಾರಿಯಲ್ಲಿ ಎಗರಿಸಿದ್ದಾರೆ. ಇದರ ಬಗ್ಗೆ ಅನುಮಾನ ಬಂದ ಮಾಲೀಕ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಆರೋಪಿಗಳನ್ನು ಬಂಧನ ಮಾಡಿ, ಅವರಿಂದ 13 ಲಕ್ಷದ 90 ಸಾವಿರ ಮೌಲ್ಯದ 14 ಟನ್ ಕಬ್ಬಿಣವನ್ನು ವಶಕ್ಕೆ ಪಡೆದು, ತನಿಖೆ ಚುರುಕುಗೊಳಿಸಿದ್ದಾರೆ.