ಕರ್ನಾಟಕ

karnataka

ETV Bharat / state

ಮಗನ ಕಳ್ಳತನಕ್ಕೆ ಪೋಷಕರೇ ಸಾಥ್​: ಗುಂಡು ಹಾರಿಸಿ ಆರೋಪಿ ಬಂಧನ - accused Arrested at RMC Yard Police Station

ಆರೋಪಿ ಆರ್​ಎಂಸಿ ಯಾರ್ಡ್ ಬಳಿ ದರೋಡೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದಾಗ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ, ಇನ್ಸ್​ಫೆಕ್ಟರ್ ಮಹೇಂದ್ರ ಕುಮಾರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

Arrest of accused who was trying robbery
ಆರೋಪಿ ಬಂಧನ

By

Published : Nov 26, 2019, 8:29 AM IST

ಬೆಂಗಳೂರು: ದರೋಡೆಗೆ ಸ್ಕೆಚ್ ಹಾಕಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಹಿಡಿಯುವಲ್ಲಿ ಆರ್​ಎಂಸಿ ಯಾರ್ಡ್ ಇನ್ಸ್​ಫೆಕ್ಟರ್ ಮಹೇಂದ್ರ ಕುಮಾರ್ ಯಶಸ್ವಿಯಾಗಿದ್ದಾರೆ.

ದರ್ಶನ್ ಬಂಧಿತ ಆರೋಪಿ. ಈತ ಆರ್​ಎಂಸಿ ಯಾರ್ಡ್ ಬಳಿ ರಾಬರಿಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದಾಗ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್​ಫೆಕ್ಟರ್ ಮಹೇಂದ್ರ ಕುಮಾರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಹಿನ್ನೆಲೆ:
ಆರೋಪಿ‌ ಎರಡು ದಿನಗಳ ಹಿಂದೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಮಾರಣಾಂತಿಕ ಹಲ್ಲೆ ಮಾಡಿದ್ದ. ಹಾಗೆಯೇ ಆರೋಪಿಯ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ವಿಚಿತ್ರ ಅಂದ್ರೆ ಮಗ ಕೈ ತುಂಬಾ ಹಣ ತರುತ್ತಿದ್ದಾನೆ ಎಂದು ಮಗನ ಕಳ್ಳತನಕ್ಕೆ ಪೋಷಕರೇ ಸಹಾಯ ಮಾಡುತ್ತಿದ್ದರು ಎಂಬ ವಿಷಯ ತಿಳಿದು ಬಂದಿದೆ. ಪೋಷಕರು ತಪ್ಪಿಸಿಕೊಂಡಿದ್ದು, ಅವರ ಹುಡುಕಾಟವೂ ನಡೆಯುತ್ತಿದೆ.

ABOUT THE AUTHOR

...view details