ಕರ್ನಾಟಕ

karnataka

ETV Bharat / state

ಪೊಲೀಸರ ವಿರುದ್ಧ ಡ್ರಿಂಕ್​ ಅಂಡ್​ ಡ್ರೈವ್ ಆರೋಪ: ಅವಾಂತರ ಸೃಷ್ಟಿಸಿದವರು ಅಂದರ್​ - bangalore police news

ಪೊಲೀಸರೇ ಕುಡಿದು ವಾಹನ ಚಾಲನೆ ಮಾಡುತ್ತಿದ್ದಾರೆ ಎಂದು ಯುವಕರು ಜನರನ್ನು ಸೇರಿಸಿ ಪೊಲೀಸರ ವಿರುದ್ಧ ಜಗಳವಾಡಿದ್ದರು. ಈ ಹಿನ್ನೆಲೆ ಯುವಕರನ್ನು ಬಂಧಿಸಿದಾಗ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

ಪೊಲೀಸರ ಮೇಲೆಯೇ ಡ್ರಿಂಕ್​ ಅಂಡ್​ ಡ್ರೈವ್ ಆರೋಪ

By

Published : Sep 22, 2019, 12:50 PM IST

ಬೆಂಗಳೂರು: ಟೋಯಿಂಗ್ ವಾಹನದ ಚಾಲಕನ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಆರೋಪ ಮಾಡಿ ಅವಾಂತರ ಸೃಷ್ಟಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕ್ ಸವಾರ ಯಶವಂತ್ ರಾವ್ ಸೇರಿದಂತೆ ನಾಲ್ವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾಜ್​ ಕುಮಾರ್​ ರಸ್ತೆಯಲ್ಲಿ ಟೋಯಿಂಗ್ ವಾಹನದ ಡ್ರೈವರ್ ಹಾಗೂ ಪೊಲೀಸರು ಕುಡಿದು ಕೆಲಸ ಮಾಡುತ್ತಿದ್ದಾರೆ ಎಂದು ಜನರನ್ನು ಸೇರಿಸಿ ಗಲಾಟೆ ಮಾಡಿದ್ದರು. ಇದಾದ ನಂತರ ಪೊಲೀಸರು ಕುಡಿದಿರಲಿಲ್ಲ ಎಂಬುದು ತಿಳಿದುಬಂದಿತ್ತು.

ಅವಾಂತರ ಸೃಷ್ಟಿಸಿದವರು ಅಂದರ್​

ಟೋಯಿಂಗ್ ವಾಹನಕ್ಕೆ ಅಡ್ಡಿ ಆರೋಪ: ಬೆಂಗಳೂರಲ್ಲಿ 20 ಮಂದಿ ವಿರುದ್ಧ ಪ್ರಕರಣ

ಈ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ನಿಜ ಬಾಯ್ಬಿಟ್ಟಿದ್ದಾರೆ. ನಮ್ಮ ವಾಹನಗಳಿಗೆ ದಂಡ ಹಾಕಿದ್ದರಿಂದ ಈ ರೀತಿ ಮಾಡಿದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details