ಕರ್ನಾಟಕ

karnataka

ETV Bharat / state

ನಕಲಿ ವಜ್ರ ತೋರಿಸಿ ವಂಚಿಸಲು ಯತ್ನಿಸಿದ ಆರೋಪಿಗಳ ಬಂಧನ - ಈಟಿವಿ ಭಾರತ ಕನ್ನಡ

ಬೆಂಗಳೂರಿನ ಉದ್ಯಮಿಗೆ ನಕಲಿ ವಜ್ರ ತೋರಿಸಿ ವಂಚಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಪುಲಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

arrest-of-accused-who-tried-to-cheat-by-showing-fake-diamond
ನಕಲಿ ವಜ್ರ ತೋರಿಸಿ ವಂಚಿಸಲು ಯತ್ನಿಸಿದ ಆರೋಪಿಗಳ ಬಂಧನ

By

Published : Dec 6, 2022, 4:17 PM IST

ಬೆಂಗಳೂರು: ನಕಲಿ ವಜ್ರ ತೋರಿಸಿ ಉದ್ಯಮಿಗೆ ವಂಚಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಪುಲಿಕೇಶಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗರಾಜ್, ಬಾಲಕೃಷ್ಣ ಹಾಗೂ ರಾಜೇಶ್ ಎಂದು ಗುರುತಿಸಲಾಗಿದೆ.

ನಗರದ ಫ್ರೇಜರ್ ಟೌನ್​​​​​ ಉದ್ಯಮಿಯೊಬ್ಬರಿಗೆ ಪರಿಚಯವಾಗಿದ್ದ ಆರೋಪಿಗಳು‌ ತಮ್ಮ ಬಳಿ 'ಅಪರೂಪದ ವಜ್ರ ಇದೆ ಎಂದು ನಂಬಿಸಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಮಾರುಕಟ್ಟೆಯಲ್ಲಿ ಹನ್ನೆರಡು ಲಕ್ಷ ರೂ. ಆಗುತ್ತದೆ. ನಿಮಗೆ ಹತ್ತು ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಆರೋಪಿಗಳ ಮಾತು ನಂಬಿದ ಉದ್ಯಮಿ ಹತ್ತು ಸಾವಿರ ರೂ. ಮುಂಗಡ ಹಣ ನೀಡಿ ವಜ್ರವನ್ನು ಕಾಯ್ದಿರಿಸಿದ್ದರು.

ಇನ್ನು ಹತ್ತು ಸಾವಿರ ಪಡೆದ ಬಳಿಕ ಆರೋಪಿಗಳು ತಮ್ಮ ಬಳಿ ಮತ್ತೊಂದು 92 ಕ್ಯಾರೆಟ್ ವಜ್ರ ಇದೆ. ಅದರ ಬೆಲೆ 25 ಕೋಟಿ ಎಂದು ಆಮಿಷವೊಡ್ಡಿದ್ದರು. ಈ ಬಗ್ಗೆ ಅನುಮಾನಗೊಂಡ ಉದ್ಯಮಿ ಪುಲಿಕೇಶಿ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ :ದೊಡ್ಡಬಳ್ಳಾಪುರ: ಮಹಿಳೆಯ ಹಿಂಬಾಲಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ

ABOUT THE AUTHOR

...view details