ಬೆಂಗಳೂರು :ಬೌನ್ಸ್ ಬೈಕ್ಗೆ ಬೆಂಕಿ ಹಚ್ಚಿದ ಆರೋಪಿಗಳನ್ನ ಬಂಧನ ಮಾಡುವಲ್ಲಿ ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೌನ್ಸ್ ಬೈಕ್ಗೆ ಬೆಂಕಿಹಚ್ಚಿದ ಆರೋಪಿಗಳ ಬಂಧನ.. - arrest of accused who fire to a bounce bike
ಬೌನ್ಸ್ ಬೈಕ್ಗೆ ಬೆಂಕಿ ಹಚ್ಚಿದ ಆರೋಪಿಗಳನ್ನ ಬಂಧಿಸುವಲ್ಲಿ ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಲರಾಜ್, ಹೇಮಂತ್, ಭರತ್‌ಗೌಡ, ಶಿವು, ಕಬೀರ್ ಬಂಧಿತ ಆರೋಪಿಗಳು. ಈ ಆರೋಪಿಗಳು ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಬೌನ್ಸ್ ಬೈಕ್‌ನ ಬೆಂಗಳೂರಿನ ಹೊರ ವಲಯಕ್ಕೆ ಕೊಂಡೊಯ್ದು ಬೆಂಕಿಹಚ್ಚಿ ವಿಕೃತ್ತ ಮೆರೆದಿದ್ದರು.
ಹೀಗಾಗಿ ಬೌನ್ಸ್ ಕಂಪನಿಯವರು ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡು ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಆರೋಪಿಗಳು ಕುಡಿದ ಮತ್ತಿನಲ್ಲಿ ವಿಕೃತ ಮೆರೆದು ಕೈಗೆ ಸಿಕ್ಕ ವಾಹನಕ್ಕೆ ಬೆಂಕಿ ಹಚ್ಚಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಸುತ್ತ-ಮುತ್ತ ಹತ್ತಾರು ಬೈಕ್ಗಳಿಗೆ ಬೆಂಕಿ ಹಚ್ಚಿದ್ದಾರೆಂದು ತಿಳಿದು ಬಂದಿದ್ದು ತನಿಖೆ ಮುಂದುವರೆದಿದೆ.
TAGGED:
latest bangalore news