ಬೆಂಗಳೂರು:ಪ್ರತಿಷ್ಠಿತ ವೈಲ್ಡ್ ಕ್ರಾಫ್ಟ್ ಕಂಪನಿಯ ಕಾಪಿ ರೈಟ್ ಉಲ್ಲಂಘನೆ ಮಾಡಿ ನಕಲಿ ಮಾಸ್ಕ್ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ಮಾಸ್ಕ್ ಮಾರಾಟ: ಆರೋಪಿಗಳು ಅಂದರ್ - ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ
ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಕಲಿ ಮಾಸ್ಕ್ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
![ನಕಲಿ ಮಾಸ್ಕ್ ಮಾರಾಟ: ಆರೋಪಿಗಳು ಅಂದರ್ Mask](https://etvbharatimages.akamaized.net/etvbharat/prod-images/768-512-12:27:33:1593068253-kn-bng-04-mask-7204498-25062020121011-2506f-00816-740.jpg)
Mask
ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ವೈಲ್ಡ್ ಕ್ರಾಫ್ಟ್ ಕಂಪನಿಯ ಕಾಪಿ ರೈಟ್ ಉಲ್ಲಂಘಿಸಿ ನಕಲಿ ಲೇಬಲ್ಗಳನ್ನು ಅಂಟಿಸಿರುವ ಮಾಸ್ಕ್ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ರವಿ, ನಾರಾಯಣ ಸ್ವಾಮಿ, ಪಾರ್ವತೇಶ್ ಬಂಧಿತ ಆರೋಪಿಗಳು. ಸದ್ಯ ಬಂಧಿತ ಆರೋಪಿಗಳಿಂದ ನಕಲಿ ಲೇಬಲ್ಗಳನ್ನು ಅಂಟಿಸಿರುವ ಮಾಸ್ಕ್ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.