ಕರ್ನಾಟಕ

karnataka

ETV Bharat / state

ಬಿಎಂಟಿಸಿ ಸಿಬ್ಬಂದಿಗೆ ಡಿಸಿ ಎಂದು ಯಾಮಾರಿಸಿದ್ದ ಚಾಲಾಕಿ ಅಂದರ್​ - BMTC news

ತಾನೊಬ್ಬ ಅಧಿಕಾರಿ, ನಾನು ಹೇಳಿದಂತೆ ಕೇಳಬೇಕು ಎಂದು ಬಿಎಂಟಿಸಿ ಅಧಿಕಾರಿಗಳನ್ನು ಹೆದರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Arrest of a man who cheats BMTC staff
ಬಿಎಂಟಿಸಿ ಸಿಬ್ಬಂದಿಗೆ ಡಿಸಿ ಎಂದು ಯಾಮಾರಿಸಿದ್ದ ಭೂಪ ಅಂದರ್​

By

Published : Oct 17, 2021, 7:03 PM IST

ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಭೂಪನೊಬ್ಬ ಸಿಕ್ಕಿಬಿದ್ದಿದ್ದಾನೆ. ಯಶವಂತಪುರದ ಬಿಎಂಟಿಸಿ ಡಿಪೋ ಗೆ ಡಿವಿಜನ್ ಕಂಟ್ರೋಲರ್ ಆಗಿ ನೇಮಕವಾಗಿದ್ದೇನೆ ಎಂದು ಹೇಳಿದ್ದ ಐನಾತಿಯ ಮಾತಿಗೆ ಬಿಎಂಟಿಸಿ ಸಿಬ್ಬಂದಿ ಬೆಚ್ಚಿಬಿದ್ದಿದ್ದರು. ತಾನು ಹೇಳಿದಂತೆ ನಡೆಯಬೇಕು ಎಂದು ಸಿಬ್ಬಂದಿಗೆ ಆಸಾಮಿ ಧಮ್ಕಿ ಕೂಡ ಹಾಕಿದ್ದ.

ಈತನ ನಡವಳಿಕೆಯ ಬಗ್ಗೆ ಅನುಮಾನಗೊಂಡ ಸಿಬ್ಬಂದಿ ವಂಚಕನ ಕುರಿತು ಮಾಹಿತಿ ಕಲೆ ಹಾಕಿದ್ದರು. ನಕಲಿ ಅಧಿಕಾರಿ ಎಂದು ಗೊತ್ತಾದ ತಕ್ಷಣ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ಅಧಿಕೃತವಾಗಿ ಅಕ್ಟೋಬರ್ 10 ರಂದು ಯಶವಂತಪುರ ಬಿಎಂಟಿಸಿ ಭದ್ರತಾ ಅಧಿಕಾರಿ ಮೋಹನ್ ಬಾಬು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನೂರ್ ಅಹಮ್ಮದ್​ನನ್ನು ಬಂಧಿಸಿ ಯಶವಂತಪುರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details