ಕರ್ನಾಟಕ

karnataka

ETV Bharat / state

ಸಾಧಾರಣ ಟಿವಿಗೆ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿ ಸ್ಟಿಕರ್​ ಅಂಟಿಸಿ ಮಾರಾಟ:  ಆರೋಪಿ ಬಂಧನ - ಬೆಂಗಳೂರು ಸುದ್ದಿ

ಸಾಧಾರಣ ಟಿವಿಗಳನ್ನ ಖರೀದಿ ಮಾಡಿ ಅದಕ್ಕೆ ಸೋನಿ ‌, ‌ಸ್ಯಾಂಮ್ ಸಂಗ್ ಕಂಪನಿ ಸ್ಟಿಕರ್​​ ಅಂಟಿಸಿ ಅಸಲಿ ಟಿವಿ ಗಳಂತೆ ಬಿಂಬಿಸಿ ಅಧಿಕ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಂಧನ
ಆರೋಪಿ ಬಂಧನ

By

Published : Jul 7, 2020, 8:42 AM IST

ಬೆಂಗಳೂರು : ಸಾಧಾರಣ ಟಿವಿಗಳಿಗೆ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಯ ಸ್ಟಿಕರ್​ ಅಂಟಿಸಿ ಮಾರಾಟ ಮಾಡುತ್ತಿದ್ದ ಖದೀಮನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಸುರೇಶ್ ‌ಬಂಧಿತ ಆರೋಪಿ. ಈತ ಸಾಧಾರಣ ಟಿವಿಗಳನ್ನ ಖರೀದಿ ಮಾಡಿ ಅದಕ್ಕೆ ಸೋನಿ ‌ಕಂಪನಿ ಸ್ಟಿಕರ್, ‌ಸ್ಯಾಂಮ್ ಸಂಗ್ ಕಂಪನಿ ಸ್ಟಿಕರ್​​ ಅಂಟಿಸಿ ಅಸಲಿ ಟಿವಿ ಗಳಂತೆ ಬಿಂಬಿಸಿ ಅಧಿಕ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ವಿಚಾರ ತಿಳಿದು ಕಂಪನಿ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಸಿಸಿಬಿ ಪೊಲೀಸರು ದೂರಿನ ಆಧಾರದ ಮೇರೆಗೆ ತಂಡ ರಚನೆ ‌ಮಾಡಿ ದಾಳಿ‌ ನಡೆಸಿ ಆರೋಪಿ ಬಂಧಿಸಿದ್ದು, ಬಂಧಿತನಿಂದ 15 ಟಿವಿ, 75 ಸಾವಿರ ರೂ. ಜಪ್ತಿ ಮಾಡಿ ‌ತನಿಖೆ‌ ‌ಮುಂದುವರೆಸಿದ್ದಾರೆ.

ABOUT THE AUTHOR

...view details