ಕರ್ನಾಟಕ

karnataka

ETV Bharat / state

ಪೊಲೀಸ್​ ಇಲಾಖೆಯಿಂದ 'ಅರೆಸ್ಟ್ ಕೊರೊನಾ' ಅಭಿಯಾನ - ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಅರೆಸ್ಟ್ ಕೊರೊನಾ ಅಂದ್ರೆ ಪೊಲೀಸರು ಅರೆಸ್ಟ್ ಮಾಡ್ತಾರಾ..? ಅನ್ನೋ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅಲ್ಲಾ, ಅರೆಸ್ಟ್ ಕೊರೊನಾ ಅಂದ್ರೆ ಠಾಣೆಗೆ ಬರುವ ಜನರಿಗೆ ಬೆಂಗಳೂರು ಪೊಲೀಸರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ.​ ತಮ್ಮ ಸಿಬ್ಬಂದಿಗೆ ಜಾಗೃತರಾಗಿರಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅರೆಸ್ಟ್ ಕೊರೊನಾ ಅಭಿಯಾನ ಶುರು ಮಾಡಿದ್ದಾರೆ.

Arrest corona campaign by police department
ಪೊಲೀಸ್​ ಇಲಾಖೆಯಿಂದ 'ಅರೆಸ್ಟ್ ಕೊರೋನಾ' ಅಭಿಯಾನ

By

Published : Mar 19, 2020, 1:26 PM IST

ಬೆಂಗಳೂರು: ವಿಶ್ವದಾದ್ಯಂತ ಕೋವಿಡ್ 19 ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲೂ ಸೋಂಕಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆ ಬೆಂಗಳೂರು ಪೊಲೀಸರು ಅರೆಸ್ಟ್ ಕೊರೊನಾ ಅಭಿಯಾನ ಶುರು ಮಾಡಿದ್ದಾರೆ.

ಅಂದಹಾಗೆ, ಅರೆಸ್ಟ್ ಕೊರೊನಾ ಅಂದ್ರೆ ಪೊಲೀಸರು ಅರೆಸ್ಟ್ ಮಾಡ್ತಾರಾ? ಅನ್ನೋ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅಲ್ಲಾ ಅರೆಸ್ಟ್ ಕೊರೊನಾ ಅಂದ್ರೆ ಠಾಣೆಗೆ ಬರುವ ಜನರಿಗೆ ಬೆಂಗಳೂರು ಪೊಲೀಸರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ.​ ತಮ್ಮ ಸಿಬ್ಬಂದಿಗೆ ಜಾಗೃತರಾಗಿರಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅರೆಸ್ಟ್ ಕೊರೊನಾ ಅಭಿಯಾನ ಶುರು ಮಾಡಿದ್ದಾರೆ.
ಅರೆಸ್ಟ್ ಕೊರೊನಾ ಅಂಶಗಳು:
1. ಪೊಲೀಸ್ ಸಿಬ್ಬಂದಿ ಕೊರೊನಾ ಬಗ್ಗೆ ಜಾಗೃತಿಯಿಂದ ಇರಬೇಕು.
2. ಪದೇ ಪದೇ ಕೈ ತೊಳಿಯುತ್ತಿರಿ.
3. ಯಾವುದೇ ಜನ ಠಾಣೆಗೆ ಬಂದರೂ ದೂರದಿಂದ ಮಾತನಾಡಿಸಿ.
4. ಸ್ಯಾನಿಟೈಸರ್, ಮಾಸ್ಕ್ಅನ್ನು ಕಡ್ಡಾಯವಾಗಿ ಬಳಸಿ.
5. ಅಗತ್ಯ ಇದ್ದರೆ ಮಾತ್ರ ಹೊರಗೆ ಹೋಗಿ ಇಲ್ಲ, ಪೊಲೀಸ್ ಠಾಣೆಯಲ್ಲೇ ಇರಿ. ಹೀಗೆ ಹಲವು ಅಂಶಗಳನ್ನು ಇದು ಒಳಗೊಂಡಿದ್ದು, ಪ್ರತಿಯೊಬ್ಬರು ಇದನ್ನ ಪಾಲಿಸುವಂತೆ ನಿಯಮ ಹೊರಡಿಸಲಾಗಿದೆ.

ABOUT THE AUTHOR

...view details