ಕರ್ನಾಟಕ

karnataka

ETV Bharat / state

ರಾಜ್ಯದ ಮೂರು ಕಡೆ ಸೇನಾ ಭರ್ತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ - Army exam

ಕೋವಿಡ್​​ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸೇನಾ ವಲಯದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ)ಗೆ ಮತ್ತೆ ಸಮಯ ನಿಗದಿಯಾಗಿದೆ. ರಾಜ್ಯದ ಮೂರು ಕಡೆಗಳಲ್ಲಿ ಅಂತಿಮ ಪರೀಕ್ಷೆ ನಡೆಯಲಿದೆ..

army-common-entrance-examination-cee
ರಾಜ್ಯದ ಮೂರು ಕಡೆ ಸೇನಾ ಭರ್ತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ

By

Published : Jul 16, 2021, 5:52 PM IST

ಬೆಂಗಳೂರು :ಸೇನಾ ನೇಮಕಾತಿ ವಲಯಕ್ಕೆ ಸಂಬಂಧಿಸಿದಂತೆ ಈಗಾಗಲೇ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ)ಯನ್ನು 2021 ಜುಲೈ 25ರಂದು ರಾಜ್ಯದ ಮೂರು ಸ್ಥಳಗಳಲ್ಲಿ ನಡೆಸಲಾಗುತ್ತಿದೆ.

ಮುಖ್ಯವಾಗಿ ಮಹಿಳಾ ಅಭ್ಯರ್ಥಿಗಳಿಗೆ ಬೆಂಗಳೂರಿನ ಕಾಮ್​ರಾಜ್​ ರಸ್ತೆಯಲ್ಲಿರುವ ಆರ್ಮಿ ಸ್ಕೂಲ್​​​ನಲ್ಲಿ ಪರೀಕ್ಷೆ ನೆಡಸಲಾಗುತ್ತಿದೆ. ಹಾಗೂ ಮಂಗಳೂರಿನ ಮೂಡಬಿದ್ರಿ ಆಳ್ವಾಸ್ ಸಂಸ್ಥೆ ಮತ್ತು ಬೆಳಗಾವಿಯ ಕೆಎಲ್​​ಇ ಸೊಸೈಟಿಯಲ್ಲಿ ಪರೀಕ್ಷೆ ನಡೆಯಲಿದೆ. ಇದಕ್ಕೂ ಮೊದಲು ಏಪ್ರಿಲ್ 25ರಿಂದ ಮೇ 30ರವರೆಗೆ ಈ ಪರೀಕ್ಷೆಗಳನ್ನ ನಡೆಸಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿತ್ತು.

ಓದಿ:MSIL ಮದ್ಯದ ಮಳಿಗೆ ತೆರೆಯಲು ಹೈಕೋರ್ಟ್ ಅಸ್ತು : ಬಾರ್​ ಮಾಲೀಕರಿಗೆ ಹಿನ್ನಡೆ

ABOUT THE AUTHOR

...view details