ಕರ್ನಾಟಕ

karnataka

ETV Bharat / state

ಬೊಮ್ಮಾಯಿ ತೆಗೆದು ನೀವು ಸಿಎಂ ಆಗ್ರಿ ಎಂದು ಯತ್ಳಾಳ್​ಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ! - ಕರ್ನಾಟಕ ಅಧಿವೇಶನ 2022

ಬೊಮ್ಮಾಯಿ ತೆಗೆದು ನೀವು ಸಿಎಂ ಆಗ್ರಿ ಅಂತಾ ಯತ್ನಾಳ್​ಗೆ ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಮಯ್ಯ ಸದನದಲ್ಲಿ ಟಾಂಗ್​ ಕೊಟ್ರು.

Argue Between Siddaramaiah and Yatnal, Karnataka session 2022, Budget session 2022, ಸದನದಲ್ಲಿ ಸಿದ್ದರಾಮಯ್ಯ ಮತ್ತು ಯತ್ನಾಳ ಮಧ್ಯ ವಾದ, ಕರ್ನಾಟಕ ಅಧಿವೇಶನ 2022, ಬಜೆಟ್​ ಅಧಿವೇಶನ 2022,
ಬೊಮ್ಮಾಯಿ ತೆಗೆದು ನೀವು ಸಿಎಂ ಆಗ್ರಿ

By

Published : Mar 8, 2022, 8:48 AM IST

ಬೆಂಗಳೂರು:ಬೊಮ್ಮಾಯಿ ತೆಗೆದು ನೀವು ಸಿಎಂ‌ ಆಗ್ರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯತ್ನಾಳ್​ಗೆ ತಾಕೀತು ಮಾಡಿರುವ ಪ್ರಸಂಗ ಸದನದಲ್ಲಿ ನಡೆಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ಕಲಾಪದಲ್ಲಿ ಅನುದಾನ ಕುರಿತು ಸಿದ್ದರಾಮಯ್ಯ ಮತ್ತು ಯತ್ನಾಳ್ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.

ಬೊಮ್ಮಾಯಿ ತೆಗೆದು ನೀವು ಸಿಎಂ ಆಗ್ರಿ ಎಂದು ಯತ್ನಾಳ್​ಗೆ ಟಾಂಗ್​

ಯತ್ನಾಳ್ ಮಾತನಾಡುತ್ತಾ, ಶಿಕಾರಿಪುರ ಬಿಟ್ಟು ಬಾದಾಮಿಯಲ್ಲೇ ಹೆಚ್ಚು ಕೆಲಸ ಆಗಿದೆ ಅಂತಾರೆ. ಅದನ್ನು ನೀವು ಬಹಿರಂಗ ಪಡಿಸಿದ್ರೆ ನಮ್ಮಂಥ ಸಾಮಾನ್ಯ ಶಾಸಕರಿಗೆ ನೆರವಾಗುತ್ತೆ ಹೇಳಿ ಎಂದರು. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯತ್ನಾಳ್ ಅವರೇ, ನೀವು ಧರಣಿ ಕೂರ್ರಿ, ನಿಮಗೇನೂ ಕೊಟ್ಟಿಲ್ಲ ಅಂತ ಧರಣಿ ಕೂರಿ. ಈ ಬಜೆಟ್​ನಲ್ಲಿ ಎಲ್ ನೋಡಿದ್ರೂ ಹಾವೇರಿ, ಶಿಗ್ಗಾಂವ್, ಹಾವೇರಿ.. ಶಿಗ್ಗಾಂವ್ ಅಂತಾ ಇದೆ. ನಿಮಗೆ ಅನುದಾನ ಕೊಟ್ಟಿಲ್ಲ ಅಂದರೆ ಧರಣಿ ಮಾಡಿ. ಬೊಮ್ಮಾಯಿ ತೆಗೆದು ನೀವು ಸಿಎಂ‌ ಆಗ್ರಿ. ಆಗ ವಿಜಯಪುರಕ್ಕೆ ಹೆಚ್ಚು ಕೊಡಬಹುದು ಎಂದು ಸೂಚ್ಯವಾಗಿ ತಿಳಿಸಿದರು.

ಓದಿ:ಎರಡೂ ರಾಷ್ಟ್ರಗಳನ್ನು ಒತ್ತಾಯಿಸಿದರೂ, ನಮ್ಮ ಪ್ರಜೆಗಳ ಸ್ಥಳಾಂತರಕ್ಕೆ ಸುರಕ್ಷಿತ ಕಾರಿಡಾರ್ ನಿರ್ಮಾಣವಾಗಿಲ್ಲ: ಟಿ.ಎಸ್.ತಿರುಮೂರ್ತಿ

ಬಾದಾಮಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅಂತ ಹೇಳಿ‌ ಮೊದಲು ಎಂದು ಯತ್ನಾಳ್ ಒತ್ತಾಯಿಸಿದರು. ಆಗ ಸಿದ್ದರಾಮಯ್ಯ, ನಮ್ಮ ಕ್ಷೇತ್ರದಲ್ಲಿ ಸ್ವಲ್ಪ ಕೆಲಸ ಆಗಿರೋದು ಹೌದು. ನಿಮ್ಮ ಕ್ಷೇತ್ರಕ್ಕಾಗಿಲ್ಲ ಅಂದ್ರೆ ರಾಜೀನಾಮೆ ಕೊಡಿ ಹಾಗಿದ್ರೆ ಎಂದರು.

ನೀವೆಲ್ಲ ಹಾಲಿ ಸಿಎಂ, ಮಾಜಿ ಸಿಎಂ ಅಡ್ಜಸ್ಟ್ ಮಾಡ್ಕಂಡಿದೀರಿ. ನಾವು ಶಾಸಕರು ಸುಮ್ನೆ ಒದರಿ ಹೋಗ್ತೀವಿ ಎಂದು ತಿಳಿಸಿದರು.

ABOUT THE AUTHOR

...view details