ಕರ್ನಾಟಕ

karnataka

ಫ್ರೀ ಕಾಶ್ಮೀರ ಬೋರ್ಡ್​ ಹಿಡಿದ ಆರ್ದ್ರಾ ಸದ್ಗುರು ಆಪ್ತೆ?... ಇಲ್ಲಿದೆ ಇಂಚಿಂಚು ಮಾಹಿತಿ

By

Published : Mar 3, 2020, 1:06 PM IST

ಟೌನ್​​ಹಾಲ್ ಬಳಿ ಫ್ರೀ ಕಾಶ್ಮೀರ ಬೋರ್ಡ್ ಹಿಡಿದಿದ್ದ ಆರೋಪಿ ಆರ್ದ್ರಾ ಬಗ್ಗೆ ಎಸ್​.ಜೆ. ಪಾರ್ಕ್​ ಪೊಲೀಸರು ಇಂಚಿಂಚು ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ. ಆರ್ದ್ರಾಳಿಗೆ ಯಾರ ಜೊತೆಯಲ್ಲಿ ಸಂಪರ್ಕ ಇತ್ತು. ಅವಳ ಆಪ್ತರು ಯಾರು ಹಾಗೂ ಅವಳು ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

Ardra accused of 'free Kashmir' board full details
ಆರೋಪಿ ಆರ್ದ್ರಾ ಬಗ್ಗೆ ಇಲ್ಲಿದೆ ಇಂಚಿಂಚು ಮಾಹಿತಿ

ಬೆಂಗಳೂರು: ಟೌನ್​​ಹಾಲ್ ಬಳಿ ಫ್ರೀ ಕಾಶ್ಮೀರ ಬೋರ್ಡ್ ಹಿಡಿದಿದ್ದ ಆರೋಪಿ ಆರ್ದ್ರಾ ಬಗ್ಗೆ ಎಸ್​.ಜೆ. ಪಾರ್ಕ್​ ಪೊಲೀಸರು ಇಂಚಿಂಚು ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ. ಆರ್ದ್ರಾಳಿಗೆ ಯಾರ ಜೊತೆಯಲ್ಲಿ ಸಂಪರ್ಕ ಇತ್ತು. ಅವಳ ಆಪ್ತರು ಯಾರು ಹಾಗೂ ಅವಳು ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಮೇ 04, 1995 ರಂದು ಬೆಂಗಳೂರಿನ ಶಂಕರಾಂಭ ಆಸ್ಪತ್ರೆಯಲ್ಲಿ ಹುಟ್ಟಿದ ಆರ್ದ್ರಾ, ನಾರಾಯಣ್ ಮತ್ತು ರಮಾರ ಏಕೈಕ ಪುತ್ರಿಯಾಗಿದ್ದಾಳೆ. ಎಲ್​ಕೆಜಿಯಿಂದ ಹತ್ತನೇ ತರಗತಿವರೆಗೆ ಮಲ್ಲೇಶ್ವರಂನ ನ್ಯಾಷನಲ್ ಪಬ್ಲಿಕ್​ ಸ್ಕೂಲ್​​ನಲ್ಲಿ ಓದಿದ ನಂತ್ರ ತಮಿಳುನಾಡಿನ ಕೊಯಮುತ್ತೂರ್​​ನ ಈಶಾ ಹೋಮ್​​ನಲ್ಲಿ ಪಿಯುಸಿ ಓದಿದ್ದಾಳೆ. ಇಲ್ಲಿ‌ ಆರ್ಟ್ಸ್​ ಮತ್ತು ಹ್ಯೂಮ್ಯಾನಿಟಿ ಆಯ್ಕೆ ಮಾಡಿಕೊಂಡ ನಂತ್ರ ಕೋರಮಂಗಲದ ಲೀಸಾ ಸ್ಕೂಲ್​ ಆಫ್​ ಡಿಸೈನ್​ನಲ್ಲಿ ಪದವಿ ಶಿಕ್ಷಣ‌ ಪಡೆದಿದ್ದಾಳೆ. ಅಲ್ಲದೇ ಈಶಾ ಫೌಂಡೇಶನ್​​ನ ಸಂಸ್ಥಾಪಕ ಜಗ್ಗಿ ವಾಸುದೇವ್​ ಅವರೊಂದಿಗೆ ಆರ್ದ್ರಾ ಆಪ್ತ ಒಡನಾಟ ಇಟ್ಟುಕೊಂಡಿದ್ದಳು ಎಂದು ತಿಳಿದುಬಂದಿದೆ.

ನಂತರದಲ್ಲಿ ಮೈಸೂರು ವಿವಿಯ ದೂರಶಿಕ್ಷಣ ಕೆಂದ್ರದಲ್ಲಿ ಡಿಪ್ಲೋಮಾ ಮತ್ತು ಗ್ರಾಫಿಕ್ಸ್​​ ಡಿಸೈನಿಂಗ್​ ಮಾಡಿ, ತನ್ನ ವಿದ್ಯಾಭ್ಯಾಸದ ಬಳಿಕ ಫ್ರಿಲ್ಯಾನ್ಸರ್​ ಆಗಿ ಕೆಲಸ ಮಾಡುತ್ತಿದ್ದಳು. ಬಳಿಕ ಪೋಷಕರನ್ನು ತೊರೆದಿದ್ದ ಆರ್ದ್ರಾ, ವಿದ್ಯಾಭ್ಯಾಸದ ಬಳಿಕ ಕೆಲಸ ಮಾಡುಲು ಶುರು ಮಾಡಿ ತನ್ನ ಹಾವಭಾವ ಶೈಲಿಯನ್ನು ಸಂಪುರ್ಣವಾಗಿ ಬದಲಿಸಿಕೊಂಡಿದ್ದಳು. ಇನ್ನು ಅವಳ ನಡೆನುಡಿ ಪೋಷಕರಿಗೆ ಇರಿಸು ಮುರಿಸು ತಂದಿತ್ತು.

ಪಕ್ಕಾ ಸಂಪ್ರದಾಯ ಕುಟುಂಬದವರಾಗಿದ್ದ ಆರ್ದ್ರಾಳ ಪೋಷಕರಿಗೆ ಆಕೆಯ ಉಡುಗೆ ತೊಡುಗೆಯ ಬಗ್ಗೆ ಬೇಸರವಿತ್ತು. ಅವಳ ಅಜ್ಜ ಹಾಗೂ ಅಜ್ಜಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಇಂಥ ವಿಷಯಗಳಿಗೆ ಮನೆಯಲ್ಲಿ ಜಗಳ ಮಾಡುತ್ತಿದ್ದ ಆರ್ದ್ರಾ, ಬಳಿಕ ಮನೆಯಿಂದ ಹೊರ ಬಂದು ಪಿಜಿ ಸೇರಿಕೊಂಡು ಫ್ರಿಲ್ಯಾನ್ಸರ್​ ಆಗಿ ಕೆಲಸ ಮಾಡಿ 15ರಿಂದ 20 ಸಾವಿರ ಸಂಪಾದಿಸುತ್ತಿದ್ದಳು.

ಒಂದು ವೇಳೆ ಹಣಕಾಸಿನ ಸಮಸ್ಯೆ ಇದ್ದಾಗ ಆಕೆಯ ತಂದೆಯೇ ಹಣ ನೀಡ್ತಿದ್ರು. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದ ಆರ್ದ್ರಾ ಒಟ್ಟು ಆರು ಬೇರೆ ಬೇರೆ ಸೋಷಿಯಲ್ ಮೀಡಿಯಾ ಐಡಿಗಳನ್ನು ಹೊಂದಿದ್ದು‌ ಆರೋಪಿ ಆರ್ದ್ರಾ ಬಳಸುತ್ತಿದ್ದ ಜಿ ಮೇಲ್ ಐಡಿಗಳು ಇಂತಿವೆ

1)cifag.5@gmail.com

2)tsobangalore@gmail.com

3)annanana95potterhead@gmail.com

4)narayanan.ardra@gmail.com

ಹಾಗೆಯೇ ಇನ್ಸ್​​ಟ್ರಾಗ್ರಾಂನಲ್ಲಿ ಆ್ಯಕ್ಟೀವ್ ಆಗಿದ್ದ ಆರ್ದ್ರಾBUZZLEBOII ಯೂಸರ್ ನೇಮ್​ ಹೆಸರಿನಲ್ಲಿ ಇದುವರೆಗೆ 182 ಪೋಸ್ಟ್​ಗಳನ್ನು ಹಾಕಿದ್ದಾಳೆ. ಹಾಗೆಯೇ 833 ಜನ ಆರ್ದ್ರಾಳನ್ನ ಫಾಲೋ ಮಾಡ್ತಿದ್ದಾರೆ. ಹಾಗೆಯೇ ಆರ್ದ್ರಾ ಕೂಡ 1,912 ಜನರನ್ನು ಫಾಲೋ ಮಾಡುತ್ತಿದ್ದಾಳೆ. ಇನ್ಸ್​​ಟ್ರಾಗ್ರಾಂನಲ್ಲಿ ಆರ್ದ್ರಾ ಮತ್ತು ಅಮೂಲ್ಯ ಲಿಯೋನ ಫ್ರೆಂಡ್ಸ್​​ ಆಗಿದ್ದಾರೆ.
ಇನ್ನು ಫೇಸ್​ಬುಕ್​ನಲ್ಲಿ ಆರ್ದ್ರಾ ಫುಲ್​ ಆ್ಯಕ್ಟೀವ್​ ಆಗಿದ್ದು, ARDAR NARAYANANಎನ್ನುವಖಾತೆ ಹೊಂದಿದ್ದಾಳೆ. ಎಫ್​ಬಿಯಲ್ಲಿ ಆರ್ದ್ರಾಳಿಗೆ 696 ಮಂದಿ ಗೆಳೆಯರಿದ್ದಾರೆ. ಎಫ್​ಬಿಯಲ್ಲಿ ಸುಮಾರು 72 ಗ್ರೂಪ್​ಗಳನ್ನು ಹೊಂದಿರುವ ಆರ್ದ್ರಾ, ಸುಮಾರು 430 ಜನ ತೃತೀಯ ಲಿಂಗಿಗಳನ್ನು, ಭಾಷಾಂತರ ಮಾಡುವ ಗ್ರೂಪ್​, ಮಾರ್ಕೆಟಿಂಗ್​ ಗ್ರೂಪ್, ವಿದ್ಯಾರ್ಥಿಗಳ ಗ್ರೂಪ್​ ಗಳನ್ನು ಹೊಂದಿದ್ದು ಕಳೆದ ಮೂರ್ನಾಲ್ಕು ತಿಂಗಳಿಂದ ಆ್ಯಕ್ಟೀವ್ ಆಗಿದ್ದಾಳೆ. ಹಾಗೂ ಚರ್ಚೆ ನಡೆಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ABOUT THE AUTHOR

...view details