ಕರ್ನಾಟಕ

karnataka

ETV Bharat / state

ಕೆಪಿಎಲ್ ಬೆಟ್ಟಿಂಗ್‌ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ಬಳ್ಳಾರಿ‌ ಟಸ್ಕರ್ಸ್ ‌ಮಾಲೀಕ - ಕೆಪಿಎಲ್ ಬೆಟ್ಟಿಂಗ್‌ ಪ್ರಕರಣದ ಸುದ್ದಿ

ಕರ್ನಾಟಕ ಪ್ರೀಮಿಯರ್ ಲೀಗ್​ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.

Aravind reddy attend CCB investigation, ಸಿಸಿಬಿ ವಿಚಾರಣೆಗೆ ಹಾಜರಾದ ಅರವಿಂದ್ ರೆಡ್ಡಿ
ಅರವಿಂದ್ ರೆಡ್ಡಿ

By

Published : Dec 18, 2019, 7:50 PM IST

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್​ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.

ಕೆಪಿಎಲ್ ಹಗರಣ: ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಬಂಧನ

ಕೆಪಿಎಲ್ ಬೆಟ್ಟಿಂಗ್​ನ ಪ್ರಮುಖ‌ ಆರೋಪಿ ಬೆಳಗಾವಿ ಪ್ಯಾಂರ್ಥಸ್ ತಂಡದ ಮಾಲೀಕ‌ ಅಶ್ಪಕ್ ಅಲಿ‌ ನೀಡಿದ ಮಾಹಿತಿ‌ ಆಧಾರದ‌ ಮೇಲೆ ಅರವಿಂದ್ ರೆಡ್ಡಿಗಾಗಿ ಸಿಸಿಬಿ‌ ಪೊಲೀಸರು ಬಲೆ ಬೀಸಿದ್ದರು. ಇದಕ್ಕೂ ಮುನ್ನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಕೆಪಿಎಲ್ ಬೆಟ್ಟಿಂಗ್‌ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಅರವಿಂದ್​ ರೆಡ್ಡಿ ದುಬೈಗೆ ಹಾರಿದ್ದರು.‌ ಈ ಸಂಬಂಧ ಸಿಸಿಬಿ ಪೊಲೀಸರು ಲುಕ್‌ಔಟ್ ನೋಟಿಸ್‌​ ಜಾರಿ ಮಾಡಿದ್ದರು. ಇದರನ್ವಯ ಇಂದು ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾದರು.

ABOUT THE AUTHOR

...view details