ಬೆಂಗಳೂರು : ರಾಜಕೀಯ ಲಾಭ ಪಡೆಯಲು ಅಡಕೆ ಆಮದು ಬಗ್ಗೆ ಕೆಲವರು ಗುಲ್ಲೆಬ್ಬಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು. ವಿಧಾನಸೌಧದಲ್ಲಿ ಅವರು, ಭೂತಾನ್ ರಾಷ್ಟ್ರದಿಂದ ಅಡಕೆ ಆಮದು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ರೈತರಿಗೆ ಯಾವುದೇ ಸಮಸ್ಯೆ ಇಲ್ಲ. 17 ಸಾವಿರ ಟನ್ ಹಸಿ ಅಡಿಕೆ ತರಲು ಅನುಮತಿ ನೀಡಲಾಗಿತ್ತು.
ಅದರಲ್ಲಿ ಶೇ 12ರಷ್ಟು ಒಣ ಅಡಕೆ ಆಗುತ್ತದೆ. ಭೂತಾನ್ ಚೈನಾ ಪಕ್ಕದಲ್ಲಿ ಇರುವ ರಾಷ್ಟ್ರ. ಭೂತಾನ್ ಜತೆ ನಾವು ಉತ್ತಮ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ಕೇಂದ್ರ ಈ ನಿರ್ಧಾರ ಮಾಡಿದೆ ಎಂದರು.
ಒಣ ಅಡಕೆ ಮತ್ತು ಅದರ ಉಪ ಉತ್ಪನ್ನಗಳನ್ನು ಅಲ್ಲಿಗೆ ರಪ್ತು ಮಾಡ್ತೀವಿ. ಅದರಿಂದ ಎರಡರಿಂದ ಮೂರು ಪಟ್ಟು ಭೂತಾನ್ ದೇಶಕ್ಕೆ ಹೋಗುತ್ತೆ. ಈ ಹಿನ್ನೆಲೆ ಕೇಂದ್ರ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ರಾಜ್ಯದ ಟಾಸ್ಕ್ ಫೋರ್ಸ್ ಕಡೆಯಿಂದಲೂ ಕೇಂದ್ರ ಸರ್ಕಾರದ ಜತೆ ಮಾತುಕತೆ ಮಾಡಲಿದ್ದೇವೆ. ಇದರಿಂದ ಯಾವುದೇ ಆಂತಕಪಡುವ ಅಗತ್ಯವಿಲ್ಲ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿರುವ ನಿಯಮ ತಡೆ ಹಿಡಿಯುವಂತೆ ಸಿಎಂ ಮನವಿ ಮಾಡಿದ್ದೇವೆ. ಇದು ಜನಪ್ರತಿನಿಧಿ ಅಧಿಕಾರ ತಡೆದಂತೆ ಆಗುತ್ತೆ. ಹೀಗಾಗಿ ತಿದ್ದುಪಡಿ ಕಾಯ್ದೆಯಲ್ಲಿನ ನಿಯಮವನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದೇವೆ. ಸಿಎಂ ನಮ್ಮ ಮನವಿಗೆ ಸ್ಪಂದಿಸಿ ತಡೆ ಹಿಡಿದಿದ್ದಾರೆ ಎಂದರು.
ಇದನ್ನೂ ಓದಿ:ಬೆಂಗಳೂರು ಮೈಸೂರು ನೂತನ ಹೆದ್ದಾರಿ ಎಫೆಕ್ಟ್.. ಇತಿಹಾಸ ಪುಟ ಸೇರುತ್ತಿದೆ ಬಿಡದಿ ಇಡ್ಲಿ