ಕರ್ನಾಟಕ

karnataka

ETV Bharat / state

ಕೊರೊನಾ ಲಕ್ಷಣಗಳಿದ್ದವರಿಗೆ ಸಲಹೆ ನೀಡಲು ಬಂತು ಆಪ್ತಮಿತ್ರ ಆ್ಯಪ್...! - app luanched by CM BS yadiyurappa

ಕೊರೊನಾ ರೋಗ ಲಕ್ಷಣಗಳಿರುವ ವ್ಯಕ್ತಿಗಳು ಆತಂಕಕ್ಕೆ ಸಿಲುಕದೇ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಪೂರಕವಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನು ಪರಿಚಯಿಸಿ ಆಪ್ತಮಿತ್ರ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

ಆಪ್ತಮಿತ್ರ ಆ್ಯಪ್
ಆಪ್ತಮಿತ್ರ ಆ್ಯಪ್

By

Published : Apr 22, 2020, 2:44 PM IST

ಬೆಂಗಳೂರು:ಕೊರೊನಾ ಶಂಕಿತರು ನೇರವಾಗಿ ಆಸ್ಪತ್ರೆಗೆ ಹೋಗದೆ ಸಹಾಯವಾಣಿಯ ಸಹಾಯ ಪಡೆದು ಅಗತ್ಯವಿದ್ದರಷ್ಟೇ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡುವ ಆಪ್ತಮಿತ್ರ ಎನ್ನುವ ಹೊಸ ಆ್ಯಪ್ ಅನ್ನು ಇಂದು‌ ಉದ್ಘಾಟಿಸಲಾಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆ್ಯಪ್​ಗೆ ಚಾಲನೆ ನೀಡಿದರು.

ಆ್ಯಪ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆಪ್ತಮಿತ್ರ ಸಹಾಯವಾಣಿ ಹಾಗೂ ಅಪ್ಲಿಕೇಷನ್ ಅನ್ನು ಸಿಎಂ ಅನಾವರಣ ಮಾಡಿದ್ದಾರೆ. 14,410 ಸಂಖ್ಯೆಯ ಈ ಸಹಾಯವಾಣಿಗೆ ಯಾರಾದರೂ ಫೋನ್ ಮಾಡಿದರೆ ಕೊರೊನಾ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ದೇಶದಲ್ಲೇ ಇದು ಪ್ರಥಮ, ಕೊರೊನಾ ಲಕ್ಷಣ ಕಂಡು ಬಂದರೆ ಈ ಸಹಾಯವಾಣಿಗೆ ಕರೆ ಮಾಡಿ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು, ಈ ಸಹಾಯ ವಾಣಿಯಲ್ಲಿ ಹಲವು ನುರಿತ ವೈದ್ಯರು, ತಜ್ಞರು ಕೆಲಸ ಮಾಡಲಿದ್ದಾರೆ. 4 ಬೆಂಗಳೂರು , 1 ಬೆಳಗಾವಿ, 1 ಮಂಗಳೂರಲ್ಲಿ ಒಟ್ಟು 6 ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ. ಒಟ್ಟಾರೆ ಐದು ಸಾವಿರ ಜನರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಪ್ರತಿ ಕೇಂದ್ರದಲ್ಲಿ 300 ಜನ ಇರಲಿದ್ದಾರೆ, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರಗೆ ಈ ಸಹಾಯವಾಣಿ ಇರಲಿದೆ ಎಂದು ತಿಳಿಸಿದರು.

ಆಪ್ತಮಿತ್ರ ಆ್ಯಪ್ ಬಿಡುಗಡೆ ಮಾಡಿದ ಸಿಎಂ

ರೋಗ ಲಕ್ಷಣ ಇರುವವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವ ಸಂದರ್ಭಗಳಲ್ಲಿ ವ್ಯದ್ಯರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಸಹಾಯವಾಣಿಗೆ ಕರೆ ಮಾಡಿ ಸಂಶಯ ಬಗೆಹರಿಸಿಕೊಳ್ಳಬಹುದು. ನೆಗಡಿ, ಕೆಮ್ಮು ಏನೇ ಇದ್ರೂ ಕರೆ ಮಾಡಬಹುದು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು, ಸಿಬ್ಬಂದಿಗಳನ್ನು ಸೋಂಕಿನಿಂದ ಉಳಿಸಬೇಕು ಎಂಬ ಉದ್ದೇಶದಿಂದ ಈ ಸಹಾಯವಾಣಿ ಪ್ರಾರಂಭಿಸಿದ್ದೇವೆ ಎಂದರು.

ಈಗಾಗಲೇ ಆ್ಯಪ್ ಮುಖಾಂತರ ಐವತ್ತು ಸಾವಿರ ಮೆಸೇಜ್ ಕಳುಹಿಸಲಾಗಿದೆ ಇನ್ಪೋಸಿಸ್, ನ್ಯಾಸ್ಕಾಸ್ ಸಂಯುಕ್ತಾಶ್ರಯದಲ್ಲಿ ಸರ್ಕಾರ ಈ ಆ್ಯಪ್ ಜಾರಿಗೆ ತಂದಿದೆ. ಒಮ್ಮೆಲೆ ಆಸ್ಪತ್ರೆಗೆ ಹೋಗುವ ಮೊದಲು ಈ ಸಹಾಯವಾಣಿಯ ಲಾಭವನ್ನು ಪಡೆದುಕೊಳ್ಳಿ, ಯಾವ ರೀತಿ ನಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಲಾಗುತ್ತದೆ. ವೈದ್ಯರಿಗೆ ಕೊರನಾ ಹರಡಿಸಬಾರದು ಎಂದು ಈ ಆ್ಯಪ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details