ಬೆಂಗಳೂರು:ರಾಜ್ಯದ ಪಿಎಸ್ಐಗಳಿಗೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಜೇಷ್ಠತೆ ಆಧಾರದ ಮೇಲೆ 270 ಪಿಎಸ್ಐಗಳಿಗೆ ಸದ್ಯ ಮುಂಬಡ್ತಿ ನೀಡಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಕುರಿತು ಎಲ್ಲಾ ಘಟಕಾಧಿಕಾರಿಗಳಿಗೆ ಪಿಎಸ್ಐಗಳ ಟ್ರ್ಯಾಕ್ ರೆಕಾರ್ಡ್ ಕಳಿಸಲು ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಪರಮಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.
ಜೇಷ್ಠತೆ ಆಧಾರದ ಮೇಲೆ 270 ಪಿಎಸ್ಐಗಳಿಗೆ ಮುಂಬಡ್ತಿ ನೀಡಲು ಪೊಲೀಸ್ ಇಲಾಖೆಯಿಂದ ಸಮ್ಮತಿ?
ಜೇಷ್ಠತೆ ಆಧಾರದ ಮೇಲೆ 270 ಪಿಎಸ್ಐಗಳಿಗೆ ಸದ್ಯ ಮುಂಬಡ್ತಿ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಪರಮಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.
ಸದ್ಯ ಪಿಎಸ್ಐ ಮುಂಬಡ್ತಿ ನೀಡಲು ಇಲಾಖಾ ವಿಚಾರಣೆ ನಡೆಸುತ್ತಿದೆ. ಚಾಲ್ತಿ ಶಿಕ್ಷೆ, ಕ್ರಿಮಿನಲ್ ಪ್ರಕರಣದ ಬಗ್ಗೆ ಪರಿಶೀಲನೆ ಸಹ ನಡೆಸಲಿದೆ. 2013-14 ರಿಂದ 2017-18 ವರೆಗಿನ ಟ್ರ್ಯಾಕ್ ರೆಕಾರ್ಡ್ ಬರುವ ಜೂನ್ 7ರ ಒಳಗೆ ಕಳಿಸುವಂತೆ ಆಯಾ ಘಟಕದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಬಡ್ತಿ ಮೀಸಲಾತಿ ಬಗ್ಗೆ ಬಿ.ಕೆ.ಪವಿತ್ರ ಕೇಸ್ ಹಾಕಿದ್ದರ ಹಿನ್ನೆಲೆಯಲ್ಲಿ ಮುಂಬಡ್ತಿ ತಡೆ ಹಿಡಿಯಲಾಗಿತ್ತು. ಇತ್ತೀಚೆಗೆ ಸುಪ್ರೀಂಕೋರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು. ಹೀಗಾಗಿ ಪಿಎಸ್ಐಗಳಿಗೆ ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಲು ಸರ್ಕಾರ ಮುಂದಾಗಿದ್ದು ಈ ಹಿನ್ನೆಲೆ ಪಿಎಸ್ಐಗಳ ಟ್ರ್ಯಾಕ್ ರೆಕಾರ್ಡ್ ಪರಿಶೀಲನೆ ನಡೆಸಲಿದೆ. ಇಲಾಖಾ ವಿಚಾರಣೆ, ಕ್ರಿಮಿನಲ್ ಕೇಸ್ ಇರುವ ಪಿಎಸ್ಐಗಳ ಮುಂಬಡ್ತಿ ತಡೆ ಹಿಡಿಯಲಾಗುತ್ತದೆ.