ಬೆಂಗಳೂರು :ಮಕ್ಕಳಿಗೆ ಸಮವಸ್ತ್ರ, ಶೂ ನೀಡಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ 132 ಕೋಟಿ ರೂ. ಒದಗಿಸಿ ಅನುಮೋದನೆ ಕೊಟ್ಟಿದ್ದೇನೆ. ತಯಾರಿಕೆಗೂ ಅನುಮತಿ ನೀಡಲಾಗಿದ್ದು, ಮಕ್ಕಳಿಗೆ ಶೂ ಮತ್ತು ಸಾಕ್ಸ್ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ನೀಡುತ್ತೇವೆ: ಸಿಎಂ - ಕೋವಿಡ್ ಟೈಮ್‌ನಲ್ಲಿ ಭಿಕ್ಷೆ ಬೇಡಿದ ದುಡ್ಡು ಎಲ್ಲೋಯ್ತು ಎಂದು ಪ್ರಶ್ನಿಸಿದ ಸಿಎಂ
ಈಗಾಗಲೇ ಮಕ್ಕಳಿಗೆ ಸಮವಸ್ತ್ರ ನೀಡಲು ಅನುಮೋದನೆ ನೀಡಿದ್ದೇವೆ. ಬಟ್ಟೆ ತಯಾರಾಗುತ್ತಿದೆ ಅದನ್ನ ಆದಷ್ಟು ಬೇಗ ಕೊಡುತ್ತೇವೆ. ಶೂ, ಸಾಕ್ಸ್ ಗೆ 132 ಕೋಟಿ ರೂ. ಕೊಟ್ಟು ಅದಕ್ಕೂ ಅನುಮೋದನೆ ಕೊಟ್ಟಿದ್ದೇವೆ ಎಂದು ಸಿಎಂ ಹೇಳಿದರು.
ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಭಿಕ್ಷೆ ಬೇಡಿಯಾದ್ರು ಯೂನಿಫಾರ್ಮ್, ಶೂ ಕೊಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹಿಂದೆ ಕೊವೀಡ್ ಸಂದರ್ಭದಲ್ಲಿ ಭಿಕ್ಷೆ ಬೇಡಿದ್ರಲ್ಲ ಆ ಹಣ ಎಲ್ಲಿ ಹೋಯ್ತ?. ಆ ಒಂದು ಕೋಟಿ ಎಲ್ಲಿ? ಇದೇ ರೀತಿ ಇದೂ ಕೂಡ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಪಕ್ಷದ ವತಿಯಿಂದ ನಡೆಯುತ್ತಿರುವ ನನ್ನ ಹುಟ್ಟುಹಬ್ಬವನ್ನು ಯಾರೂ ವಿರೋಧಿಸಿಲ್ಲ: ಸಿದ್ದರಾಮಯ್ಯ