ಬೆಂಗಳೂರು:ಪೊಲೀಸ್ ಇಲಾಖೆಗೆ ಪ್ಯಾರಿಸ್ ನಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತಿಚೆಗೆ ನಗರ ಪೊಲೀಸ್ ಪ್ರಮುಖ ಜಂಕ್ಷನ್ಸ್ ನಲ್ಲಿ ಟ್ರಾಫಿಕ್ ಪೊಲೀಸರ ರೀತಿ ಮ್ಯಾನಿ ಕ್ಯೂ ನಿಲ್ಲಿಸಿರುವುದು ಮೆಚ್ಚುಗೆಗೆ ಕಾರಣವಾಗಿದೆ.
ಅಬ್ಬಾ ಇದಕ್ಕಾಗಿ ಪೊಲೀಸ್ ಇಲಾಖೆಗೆ ಪ್ಯಾರಿಸ್ ನಿಂದ ಮೆಚ್ಚುಗೆ..! - ಪೊಲೀಸ್ ಇಲಾಖೆಗೆ ಪ್ಯಾರಿಸ್ ನಿಂದ ಮೆಚ್ಚುಗೆ
ಪೊಲೀಸ್ ಇಲಾಖೆಯಲ್ಲಿ ಮ್ಯಾನ್ ಪವರ್ ಕಡಿಮೆ ಇದ್ದ ಕಾರಣ ಪ್ರಮುಖ ಜಂಕ್ಷನ್ಸ್ ನಲ್ಲಿ ಟ್ರಾಫಿಕ್ ಪೊಲೀಸರ ರೀತಿಯಲ್ಲಿ ಮ್ಯಾನಿ ಕ್ಯೂ ನಿಲ್ಲಿಸಲಾಗಿತ್ತು. ಬೆಂಗಳೂರು ಪೊಲೀಸರು ಈ ಕಾರ್ಯ ಈಗ ಪ್ಯಾರಿಸ್ ಪೊಲೀಸರ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಮ್ಯಾನಿ ಕ್ಯೂ?:ಆಯುಕ್ತ ಭಾಸ್ಕರ್ ರಾವ್ ಅವರು ಪೊಲೀಸ್ ಇಲಾಖೆಯಲ್ಲಿ ಮ್ಯಾನ್ ಪವರ್ ಕಡಿಮೆ ಇದ್ದ ಕಾರಣ ಪ್ರಮುಖ ಜಂಕ್ಷನ್ಸ್ ನಲ್ಲಿ ಟ್ರಾಫಿಕ್ ಪೊಲೀಸರ ರೀತಿ ಮ್ಯಾನಿ ಕ್ಯೂ ನಿಲ್ಲಿಸಿದ್ರು. ಈ ಮೂಲಕ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರಿಗೆ ಭಯ ಬರಲಿ ಎಂದು ಇದನ್ನ’ಪೊಲೀಸರ ರೀತಿನೇ ಕಾಣುವ ಡ್ರೆಸ್ ಹಾಕಿ ನಿಲ್ಲಿಸಲಾಗಿತ್ತು’. ಹೀಗಾಗಿ ಪ್ಯಾರಿಸ್ ಪೊಲೀಸರು ಇದನ್ನ ಪರಿಗಣನೆಗೆ ತೆಗೆದುಕೊಂಡಿದ್ದು, ನಮ್ಮ ಪೊಲೀಸ್ ಇಲಾಖೆಯ ಐಡಿಯಾವನ್ನ ಪ್ಯಾರಿಸ್ ನಲ್ಲಿ ಜಾರಿಗೆ ತರಲು ಚಿಂತನೆ ನಡೆಸಿದೆ. ಈ ಕುರಿತು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜೊತೆ ಪ್ಯಾರಿಸ್ ಪೊಲೀಸರು ಚರ್ಚೆ ನಡೆಸಿದ್ದಾರಂತೆ.
ಇನ್ನು ಇತ್ತೀಚೆಗೆ ಭಾಸ್ಕರ್ ರಾವ್ ಅವರು ಮಾಧ್ಯಮದ ಜೊತೆ ಮಾತನಾಡಿ, ಮ್ಯಾನಿ ಕ್ಯೂ ಅನ್ನು ಕೆಲವರು ನಗೆಪಾಟಲಿಗೆ ಗುರಿ ಮಾಡಿದ್ದರು. ಆದರೆ, ಇದು ವಾಹನ ಸವಾರರು ಟ್ರಾಫಿಕ್ ನಿಯಮ ಪಾಲಿಸುವಂತೆ ಮಾಡುವಲ್ಲಿ ಈ ಮ್ಯಾನಿ ಕ್ಯೂ ಸಹಕಾರಿಯಾಗಿತ್ತು. ದೂರದಿಂದ ನೋಡುವಾಗ ನಿಜವಾದ ಪೊಲೀಸರ ರೀತಿನೆ ಕಾಣ್ತಿದೆ ಎಂದಿದ್ರು. ಸದ್ಯ ಇದನ್ನ ಪ್ಯಾರೀಸ್ ನಲ್ಲಿ ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ಸ್ಟಷ್ಟನೆ ನೀಡಿದ್ದರು.