ಬೆಂಗಳೂರು: ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಹಿಂದುಸ್ತಾನ್ ಸ್ಕೌಟ್ಸ್ ಗೈಡ್ಸ್ನ ಕೊರೊನಾ ವಾರಿಯರ್ಸ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪ್ರಶಂಸಾ ಪತ್ರಗಳನ್ನು ನೀಡಿ ಸನ್ಮಾನಿಸಿದರು.
ಸ್ಕೌಟ್ಸ್ ಗೈಡ್ಸ್ನ ಕೊರೊನಾ ವಾರಿಯರ್ಸ್ಗೆ ಪೊಲೀಸ್ ಆಯುಕ್ತರಿಂದ ಮೆಚ್ಚುಗೆ - ಬೆಂಗಳೂರು
ಹಿಂದೂಸ್ಥಾನ್ ಸ್ಕೌಟ್ಸ್ ಗೈಡ್ಸ್ ಎಂಬುದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಸುಮಾರು 100 ವರ್ಷಗಳಷ್ಟು ಇತಿಹಾಸ ಹೊಂದಿದೆ.

ಸ್ಕೌಟ್ಸ್ ಗೈಡ್ಸ್
ನಂತರ ಮಾತನಾಡಿದ ಅವರು, ಹಿಂದೂಸ್ಥಾನ್ ಸ್ಕೌಟ್ಸ್ ಗೈಡ್ಸ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ಸುಮಾರು 100 ವರ್ಷಗಳ ಇತಿಹಾಸವಿದೆ. ಶಾಲಾ, ಕಾಲೇಜು ಮಟ್ಟದಲ್ಲಿ ಮಕ್ಕಳಿಗೆ ದೇಶಭಕ್ತಿ, ಶಿಸ್ತು ಮತ್ತು ಸಂಯಮ ಒಳಗೊಂಡಂತೆ ಇನ್ನಿತರ ಸಮಾಜ ಸೇವೆಗಳಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕೆಂದರ ಬಗ್ಗೆ ಉತ್ತಮ ತರಬೇತಿ ನೀಡುತ್ತದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ನ ಹಿರಿಯ ಸದಸ್ಯರು ಭಾಗಿಯಾಗಿದ್ದರು.