ಬೆಂಗಳೂರು: ಕೆಪಿಎಸ್ಸಿಯಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೆ ಸದಸ್ಯರ ನೇಮಕ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.
ಕೆಪಿಎಸ್ಸಿಗೆ ಮೂವರು ಸದಸ್ಯರ ನೇಮಕ - ವಿಜಯಕುಮಾರ್ ಕುಚನುರೆ
ಅಧಿಕಾರೇತರ ಸದಸ್ಯರನ್ನಾಗಿ ವಿಜಯಕುಮಾರ್ ಕುಚನುರೆ, ಆರ್.ಗಿರೀಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಕೆಪಿಎಸ್ಸಿಗೆ ಮೂವರು ಸದಸ್ಯರ ನೇಮಕ
ಶಿವಶಂಕರ್ ಸಾಹುಕಾರ್ರನ್ನು ಅಧಿಕಾರಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಅಧಿಕಾರೇತರ ಸದಸ್ಯರನ್ನಾಗಿ ವಿಜಯಕುಮಾರ್ ಕುಚನುರೆ, ಆರ್.ಗಿರೀಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇದಕ್ಕೂ ಮುನ್ನ ರಾಜ್ಯಪಾಲರು ಷಡಕ್ಷರಿ ಸ್ವಾಮಿಯವರನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ರಾಜ್ಯಪಾಲರು ನೇಮಕ ಮಾಡಿದ್ದರು. ಇದೀಗ ಆಯೋಗದಲ್ಲಿ ಖಾಲಿ ಇದ್ದ ಮೂರು ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.