ಕರ್ನಾಟಕ

karnataka

ETV Bharat / state

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿಗೆ ಹೊಸ ಸದಸ್ಯರ ನೇಮಕ! - Appointment of new members to BJP Executive Committee

ಡಿಸೆಂಬರ್ 5 ರಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ಅನ್ವರ್ ಮಾಣಿಪ್ಪಾಡಿ, ಜೀವರಾಜ್, ಜಗ್ಗೇಶ್, ಸಿ.ಕೆ ರಾಮಮೂರ್ತಿ, ಪ್ರಕಾಶ್ ಮಂಡೋತ್ ಸೇರಿದಂತೆ 69 ಸದಸ್ಯರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

State BJP Executive Committee
ಬಿಜೆಪಿ ಕಾರ್ಯಕಾರಿಣಿ ಸಮಿತಿಗೆ ಹೊಸ ಸದಸ್ಯರ ನೇಮಕ

By

Published : Nov 30, 2020, 1:08 PM IST

ಬೆಂಗಳೂರು: ಡಿಸೆಂಬರ್ 5 ರಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದ್ದು, 69 ಸದಸ್ಯರ ನೂತನ ಪಟ್ಟಿಯನ್ನು ರಾಜ್ಯ ಬಿಜೆಪಿ ಬಿಡುಗಡೆಗೊಳಿಸಿದೆ. ಜೊತೆಗೆ 25 ವಿಶೇಷ ಆಹ್ವಾನಿತರ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಅನ್ವರ್ ಮಾಣಿಪ್ಪಾಡಿ, ಜೀವರಾಜ್, ಜಗ್ಗೇಶ್, ಸಿ.ಕೆ ರಾಮಮೂರ್ತಿ, ಪ್ರಕಾಶ್ ಮಂಡೋತ್ ಸೇರಿದಂತೆ 69 ಸದಸ್ಯರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ, ಪ್ರಭಾಕರ್ ಕೋರೆ, ಸಿ.ಹೆಚ್.ವಿಜಯ ಶಂಕರ್, ಕಟ್ಟಾ ಸುಬ್ರಮಣ್ಯ ನಾಯ್ಡು, ಡಿ.ಎಸ್.ವೀರಯ್ಯ, ಮಾಳವಿಕಾ ಅವಿನಾಶ್, ಶಂಕರ್ ಬಿದರಿ ಸೇರಿದಂತೆ 25 ಸದಸ್ಯರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಲಾಗಿದೆ.

ಡಿಸೆಂಬರ್ 5 ರಂದು ನಡೆಯಲಿರುವ ಮಹತ್ವದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರ ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ್ತು ಗ್ರಾಮ ಪಂಚಾಯತ್ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಅದಕ್ಕಾಗಿ ಹೊಸ ಕಾರ್ಯಕಾರಿಣಿ ಸದಸ್ಯರ ಪಡೆಯನ್ನು ಬಿಜೆಪಿ ರಚಿಸಿದೆ.

ABOUT THE AUTHOR

...view details