ಕರ್ನಾಟಕ

karnataka

ETV Bharat / state

ಡಿಸಿಎಂಗಳ ನೇಮಕ ಹೈಕಮಾಂಡ್​ಗೆ ಬಿಟ್ಟಿದ್ದು: ಸಚಿವ ಡಾ.ಜಿ.ಪರಮೇಶ್ವರ್ - ಕಾವೇರಿ ನೀರು ಪ್ರತಿಭಟನೆ

ರಾಜ್ಯ ಹೆಚ್ಚು ಡಿಸಿಎಂಗಳ ನೇಮಕಾತಿ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ.

ಸಚಿವ ಡಾ ಜಿ ಪರಮೇಶ್ವರ್
ಸಚಿವ ಡಾ ಜಿ ಪರಮೇಶ್ವರ್

By ETV Bharat Karnataka Team

Published : Sep 1, 2023, 3:19 PM IST

ಬೆಂಗಳೂರು :ಹೆಚ್ಚು ಡಿಸಿಎಂಗಳ ನೇಮಕ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು, ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರದಲ್ಲಿ ಇಂದು ಮಾತನಾಡಿದ ಅವರು, ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.

ಬಿಜೆಪಿ ನಾಯಕರ ರಿವರ್ಸ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲವೂ ಗೊತ್ತಾಗುತ್ತದೆ, ಸ್ವಲ್ಪ ದಿನದಲ್ಲೇ ನೋಡಿ. ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಅನ್ನೋದು ತಿಳಿಯಲಿದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕನ ನೇಮಕ ವಿಳಂಬ ವಿಚಾರವಾಗಿ, ಸಂವಿಧಾನಾತ್ಮಕವಾಗಿ ವಿಪಕ್ಷ ನಾಯಕ ಇರಬೇಕು. ಅವರ ಪಕ್ಷದ ಆಂತರಿಕ ವಿಚಾರ ಹೇಗಿದೆ ಅನ್ನೋದು ಗೊತ್ತಾಗ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ. ಈಗ ಬಿಜೆಪಿಯವರೂ ನಮ್ಮಂತೆ ಆಗಿದ್ದಾರೆ. ದೆಹಲಿ ಕಡೆ ನೋಡ್ತಿದ್ದಾರೆ. ಮೊದಲು ಹೈಕಮಾಂಡ್ ಕಡೆ ಎಲ್ಲದಕ್ಕೂ ಕಾಂಗ್ರೆಸ್‌ನವರು ನೋಡ್ತಾರೆ ಅಂತಿದ್ರು. ಈಗ ಬಿಜೆಪಿಯವರೂ ದೆಹಲಿ ಕಡೆ ನೋಡುವಂತಾಗಿದೆ ಎಂದು ಟೀಕಿಸಿದರು.

ಒನ್​ ನೇಷನ್, ಒನ್ ಎಲೆಕ್ಷನ್ ಚರ್ಚೆಗೆ, ಮೆಜಾರಿಟಿ ಇದೆ ಎಂದು ಏನೇನೋ ತೀರ್ಮಾನ ಮಾಡ್ತಿದ್ದಾರೆ. ಒಕ್ಕೂಟದ ವ್ಯವಸ್ಥೆಯನ್ನು ನೋಡಬೇಕಾಗುತ್ತದೆ. ಸ್ಟೇಟ್, ಸೆಂಟ್ರಲ್ ರಿಲೇಶನ್​ಶಿಪ್ ಚೆಂದ ಇರಬೇಕೆಂದು ಅಂಬೇಡ್ಕರ್ ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಇದು ಟೆಸ್ಟ್ ಕೂಡ ಆಗಿದೆ ಎಂದು ತಿಳಿಸಿದರು.

ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವರು, ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಸೂಚನೆ ಕೊಟ್ಟಿದ್ದೇನೆ. ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಇಲಾಖೆ ತೆಗೆದುಕೊಳ್ಳಲಿದೆ ಎಂದರು.

ಹ್ಯಾಕರ್ ಶ್ರೀಕಿ ವಿಚಾರಣೆ ವಿಚಾರವಾಗಿ, ಯಾರನ್ನು ವಿಚಾರಿಸಬೇಕೆಂಬುದು ಅಧಿಕಾರಿಗಳಿಗೆ ಬಿಟ್ಟಿದ್ದು. ಬೇಕಾದಾಗ ಕರೆಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಕಾವೇರಿ: ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಸಭೆ; 'ನೀರು ಬಿಡುಗಡೆ ಆದೇಶ ಕರ್ನಾಟಕಕ್ಕೆ ನೋವಿನದು'- ಡಿಕೆಶಿ

ABOUT THE AUTHOR

...view details