ಕರ್ನಾಟಕ

karnataka

ETV Bharat / state

ನಿಗಮ ಮಂಡಳಿಗಳ ನೇಮಕಪಟ್ಟಿ ಶೀಘ್ರದಲ್ಲೇ ಆಗಲಿದೆ: ಸಚಿವ ರಾಮಲಿಂಗಾರೆಡ್ಡಿ - ನಿಗಮ ಮಂಡಳಿಗಳ ನೇಮಕಪಟ್ಟಿ

ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಾಗ ನಮಗಾದ ಪರಿಸ್ಥಿತಿಯೇ ಬಿಜೆಪಿಯವರಿಗೂ ಆಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ನಿಗಮ, ಮಂಡಳಿ ನೇಮಕಾತಿ ವಿಚಾರವಾಗಿಯೂ ಸಚಿವರು ಮಾತನಾಡಿದರು.

Minister Ramalingareddy
ಸಚಿವ ರಾಮಲಿಂಗಾರೆಡ್ಡಿ

By ETV Bharat Karnataka Team

Published : Dec 21, 2023, 8:15 PM IST

ಬೆಂಗಳೂರು: ನಿಗಮ, ಮಂಡಳಿಗಳ ನೇಮಕ ಪಟ್ಟಿ ಅಗತ್ಯವಾಗಿ ಆಗಬೇಕು. ಅದು ಶೀಘ್ರವೇ ಆಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಕೆಲವು ಶಾಸಕರಿಗೆ ನೀಡಿದರೆ ಉಳಿದ ಶಾಸಕರು, ಕಾರ್ಯಕರ್ತರಿಗೆ ಬೇಸರವಾಗುತ್ತದೆ. ಶಾಸಕರನ್ನಷ್ಟೇ ಆಯ್ಕೆ ಮಾಡಿದರೆ ಕಾರ್ಯಕರ್ತರು ಬೇಸರಗೊಳ್ಳುತ್ತಾರೆ. ಈಗಾಗಲೇ ಈ ಬಗ್ಗೆ ಎಲ್ಲರ ಜೊತೆ ಮಾತುಕತೆ ನಡೆದಿದೆ ಎಂದರು‌.

ಕಾಂಗ್ರೆಸ್​ನಲ್ಲಿ ಅಜಿತ್ ಪವಾರ್, ಶಿಂಧೆ ಅಂಥರಿದ್ದಾರೆ. ಅವರು ಯಾವಾಗ ಪಕ್ಷದಿಂದ ಹೊರಬರುತ್ತಾರೆ ಎನ್ನುವುದು ಗೊತ್ತಿಲ್ಲ ಎನ್ನುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ. ಕನಸು ಕಾಣೋದು ತಪ್ಪು ಅಂತ ಹೇಳಲು ಆಗುವುದಿಲ್ಲ. ಅವರ ಯಾವ ಕನಸು ಕೂಡ ನನಸಾಗಲ್ಲ ಎಂದು ತಿರುಗೇಟು ನೀಡಿದರು.

ದೇವೇಗೌಡರ ಕುಟುಂಬ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಕುರಿತು ಮಾತನಾಡಿ, ಜೆಡಿಎಸ್​ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆಗ ಜೆಡಿಎಸ್ ಕಾರ್ಯಕರ್ತರು ನಮಗೆ ಮತ ಹಾಕಲಿಲ್ಲ. ನಮ್ಮ ಕಾರ್ಯಕರ್ತರು ಜೆಡಿಎಸ್‌‌ಗೆ ಮತ ಹಾಕಲಿಲ್ಲ. ಬಿಜೆಪಿಯವರಿಗೂ ಅದೇ ರೀತಿ ಆಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:ಕೆಕೆಆರ್​ಟಿಸಿ ಸಿಬ್ಬಂದಿಗೆ ₹1.20 ಕೋಟಿ ಮೊತ್ತದ ಅಪಘಾತ ಪರಿಹಾರ‌ ವಿಮಾ ಯೋಜನೆ

ABOUT THE AUTHOR

...view details