ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಭೌಗೋಳಿಕ ಭಾಷಾ ಅಧ್ಯಯನ ಕೇಂದ್ರದ ವತಿಯಿಂದ, ವಿದೇಶಿ ಭಾಷೆಗಳ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
2021ನೇ ಸಾಲಿನ ಫ್ರೆಂಚ್, ಜರ್ಮನ್, ಜಪಾನೀಸ್, ಸ್ಪಾನಿಷ್, ಕೊರಿಯನ್ ಮತ್ತು ಚೈನೀಸ್, ಸರ್ಟಿಫಿಕೇಟ್-I ಮತ್ತು ಸರ್ಟಿಫಿಕೇಟ್-II ಕೋರ್ಸಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕೋರ್ಸಿನ ಅವಧಿಯು 4 ತಿಂಗಳಾಗಿದ್ದು ಪ್ರವೇಶಾತಿಯು ದಂಡ ಶುಲ್ಕ ರಹಿತವಾಗಿ, ಫೆಬ್ರವರಿ 2 ರಿಂದ 7 ರವರೆಗೆ ಹಾಗೂ ರೂ 200 ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. ಕೋರ್ಸುಗಳ ಪ್ರವೇಶಾತಿಗೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಪಿಯುಸಿ ಅಥವಾ 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿರತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ವಿ.ವಿ ದೂರವಾಣಿ ಸಂಖ್ಯೆ 080-22961280/ 9845489267 ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳಿಗಾಗಿ ಭೌಗೋಳಿಕ ಭಾಷಾ ಅಧ್ಯಯನ ಕೇಂದ್ರ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಅರಮನೆ ರಸ್ತೆ, ಪ್ರಸನ್ನ ಕುಮಾರ ಬ್ಲಾಕ್, ಸೆಂಟ್ರಲ್ ಕಾಲೇಜು ಹಿಂಭಾಗ, ಮೈಸೂರು ಬ್ಯಾಂಕ್ ವೃತ್ತದ ಹತ್ತಿರ, ಬೆಂಗಳೂರು -09 ಕ್ಕೆ ವಿದ್ಯಾರ್ಥಿಗಳು ಸಂಪರ್ಕಿಸಬಹುದು ಎಂದು ಭಾಷಾ ಅಧ್ಯಯನ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.