ಬೆಂಗಳೂರು: ಬೆಂಗಳೂರುಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಶಿಶಿಕ್ಷು (ಅಪ್ರೆಂಟಿಸ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಹಾಗೂ ಡಿಪ್ಲೊಮಾ ಆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಶಿಶಿಕ್ಷು ಕಾಯ್ದೆ 1961 ಅಡಿಯಲ್ಲಿ ಒಟ್ಟು 636 ಹುದ್ದೆಗಳ ಭರ್ತಿಗೆ ಕ್ರಮಕ್ಕೆ ಮುಂದಾಗಲಾಗಿದ್ದು, ಈ ಹುದ್ದೆಗಳ ತರಬೇತಿ ಅವಧಿ ಒಂದರಿಂದ ಎರಡು ವರ್ಷದವರೆಗೆ ಇದೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುವುದು. ಅಭ್ಯರ್ಥಿಗಳನ್ನು ಮೀಸಲಾತಿ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಬಿಎಂಟಿಸಿಯಲ್ಲಿಯಲ್ಲಿ ಖಾಲಿ ಇರುವ ಮೆಕ್ಯಾನಿಕ್ ಡೀಸೆಲ್, ಫಿಟ್ಟರ್, ವೆಲ್ಡರ್, ಮೋಟರ್ ವೆಹಿಕಲ್ ಬಾಡಿ ಬಿಲ್ಡರ್, ಎಲ್ಎಕ್ಟ್ರೀಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಕಂಪ್ಯೂಟರ್ ಆಪರೇಟರ್ ಕಂ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು: ಮಾನ್ಯತೆ ಪಡೆದ ಸಂಸ್ಥೆಗಳಿಂದ ಎಸ್ಎಸ್ಎಲ್ಸಿ, ಐಟಿಐ, ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಕೆ ದಿನಾಂಕ: ಈ ಹುದ್ದೆಗೆ ಫೆಬ್ರವರಿ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್ 15 ಆಗಿದೆ.
ತರಬೇತಿ ಭತ್ಯೆ:ಅಭ್ಯರ್ಥಿಗಳ ವಿದ್ಯಾರ್ಹತೆಗೆ ಅನುಗುಣವಾಗಿ ಭತ್ಯೆ ನಿಗದಿಯಾಗಿದೆ. ಹುದ್ದೆ ಅನುಸಾರವಾಗಿ ಮಾಸಿಕ 6000 ರೂ ನಿಂದ 9000 ರೂವರೆಗೆ ಭತ್ಯೆ ನೀಡಲಾಗುವುದು.