ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೈದಾನಗಳಲ್ಲಿ ತಾತ್ಕಾಲಿಕ ಚಿಲ್ಲರೆ ಪಟಾಕಿ ಮಾರಾಟ ಮಳಿಗೆ ತೆರೆಯಲು ಆಸಕ್ತ ಸಾರ್ವಜನಿಕರಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಸೇವಾ ಸಿಂಧು ಅಥವಾ ಆನ್‌ಲೈನ್ ಮುಖಾಂತರ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅ.17 ರಿಂದ 18 ರವರೆಗೆ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ ಶುಲ್ಕವಾಗಿ 5 ಸಾವಿರ ರೂ. ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್, ಅಡ್ಮಿನಿಸ್ಟ್ರೇಷನ್ ಬೆಂಗಳೂರು ಸಿಟಿ ಹೆಸರಿನಲ್ಲಿ 25 ಸಾವಿರ ರೂ.ಗೆ ಡಿಡಿ ಪಡೆದು, ಆ ಡಿಡಿ ಪ್ರತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ಡಿಜಿಪಿ ಮತ್ತು ಡಿಜಿ ಕರ್ನಾಟಕ ಫೈರ್ ಆ್ಯಂಡ್ ಎಮರ್ಜನ್ಸಿ ಸರ್ವಿಸಸ್ ಬೆಂಗಳೂರು ಹೆಸರಿನಲ್ಲಿ 5 ಸಾವಿರ ರೂ.ಗೆ ಡಿಡಿ ಪಡೆದು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ಡಿಡಿಯಲ್ಲಿ ಅರ್ಜಿದಾರರ ಹೆಸರು ಹೊರತುಪಡಿಸಿ ಬೇರೆಯವರ ಹೆಸರಿದ್ದಲ್ಲಿ ಅಂತಹ ಡಿಡಿ ಪರಿಗಣಿಸುವುದಿಲ್ಲ.
ಇದನ್ನೂ ಓದಿ:ದೀಪಾವಳಿಗೆ ಸಿದ್ಧಗೊಂಡಿವೆ ಪರಿಸರ ಸ್ನೇಹಿ ಪಟಾಕಿಗಳು: ಮಂಗಳೂರಿನ ನಿತಿನ್ ವಾಸ್ರಿಂದ ತಯಾರಿ