ಕರ್ನಾಟಕ

karnataka

ETV Bharat / state

ಹೈಕೋರ್ಟ್​​ನಲ್ಲಿ ಖಾಲಿಯಿರುವ ಭಾಷಾಂತರಕಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ - ಹೈಕೋರ್ಟ್​​ನಲ್ಲಿ ಜಾಬ್

ಹೈಕೋರ್ಟ್​ನಲ್ಲಿ ಖಾಲಿಯಿರುವ ಅನುವಾದಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೈಕೋರ್ಟ್
ಹೈಕೋರ್ಟ್

By

Published : Sep 16, 2021, 2:02 PM IST

ಬೆಂಗಳೂರು: ರಾಜ್ಯ ಹೈಕೋರ್ಟ್​​ನಲ್ಲಿ ಖಾಲಿ ಇರುವ ಭಾಷಾಂತರಕಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಪದವಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.

ಹಾಗೆಯೇ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವೇತನ ಶ್ರೇಣಿ 44,900 ರಿಂದ ಭತ್ಯೆಗಳನ್ನು ಒಳಗೊಂಡು 1,42,400 ರೂ.ವರೆಗೆ ಇರಲಿದೆ.

ವಯೋಮಿತಿ ಸಾಮಾನ್ಯ ವರ್ಗದವರಿಗೆ 18 ವರ್ಷದಿಂದ ಗರಿಷ್ಠ 35 ವರ್ಷ. ಹಿಂದುಳಿದ ವರ್ಗ ಹಾಗೂ ಎಸ್​​ಸಿ - ಎಸ್​ಟಿ ಸಮುದಾಯದ ಅಭ್ಯರ್ಥಿಗಳಿಗೆ 3 ರಿಂದ 5 ವರ್ಷ ವಯೋಮಿತಿ ಸಡಿಲಿಕೆಯಿದೆ.

ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರಲಿದ್ದು, ಅಂಕಗಳು ಹಾಗೂ ಮೀಸಲು ಆಧಾರದಲ್ಲಿ 1 ರಿಂದ 10 ರಂತೆ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 16 ಕಡೆಯ ದಿನಾಂಕವಾಗಿದ್ದು, ಆನ್ ಲೈನ್ ಮೂಲಕವೇ ಸಲ್ಲಿಸಬೇಕಿದೆ.

ಅರ್ಜಿ ಸಲ್ಲಿಸಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗೆ ಹೈಕೋರ್ಟ್ ವೆಬ್ ಸೈಟ್ ಪರಿಶೀಲಿಸಬಹುದಾಗಿದೆ.

ವೆಬ್ ವಿಳಾಸ:- https://karnatakajudiciary.kar.nic.in/

ABOUT THE AUTHOR

...view details