ಕರ್ನಾಟಕ

karnataka

ETV Bharat / state

ಉಪಚುನಾವಣೆಗೆ ತಡೆ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದೇವೆ: ಎಸ್‌ ಟಿ ಸೋಮಶೇಖರ್ - ಸುಪ್ರೀಂಕೋರ್ಟ್​ ವಿಚಾರಣೆ

ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಸುವ ವೇಳೆ ಉಪಚುನಾವಣೆಗೆ ತಡೆ ಕೋರಿ ಅರ್ಜಿ ಸಲ್ಲಿಸಲಿದ್ದೇವೆ ಎಂದು ಎಸ್​.ಟಿ.ಸೋಮಶೇಖರ್ ಹೇಳಿದರು.

ಅನರ್ಹ ಶಾಸಕ ಎಸ್.ಟಿ.ಸೋಮಶೇಕರ್

By

Published : Sep 21, 2019, 9:11 PM IST

ಬೆಂಗಳೂರು:ಅನರ್ಹ ಶಾಸಕರ ರಾಜಕೀಯ ಭವಿಷ್ಯ ಸುಪ್ರೀಂ ಅಂಗಳದಲ್ಲಿದ್ದು, ಉಪಚುನಾವಣೆಗೆ ಅವಕಾಶ ನೀಡದಂತೆ ತಡೆ ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಅನರ್ಹ ಶಾಸಕ ಎಸ್​.ಟಿ.ಸೋಮಶೇಖರ ಹೇಳಿದರು.

ಅನರ್ಹ ಶಾಸಕ ಎಸ್.ಟಿ.ಸೋಮಶೇಕರ್

ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನಲೆ ಸಿಎಂ ಜೊತೆ, ಅನರ್ಹ ಶಾಸಕರು ಸಭೆ ನಡೆಸಿದ ನಂತರ ಎಸ್​.ಟಿ.ಸೋಮಶೇಖರ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಸುಪ್ರೀಂಕೋರ್ಟ್​‌ನಲ್ಲಿ ಅನರ್ಹ ಶಾಸಕರ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ‌ಯಾವುದೇ ಆದೇಶ ಹೊರಬಂದಿಲ್ಲ. ಹೀಗಾಗಿ ಸದ್ಯಕ್ಕೆ ಚುನಾವಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಲಿದ್ದೇವೆ ಎಂದರು.

ಸಿಎಂ ಬಿಎಸ್​ವೈ ಸೂಚನೆ ಮೇರೆಗೆ ದೆಹಲಿಗೆ ತೆರಳಲು ಅನರ್ಹ ಶಾಸಕರು ತೀರ್ಮಾನಿಸಿದ್ದು, ಬೆಳಗ್ಗೆ ಹನ್ನೊಂದು ಗಂಟೆಗೆ ವಕೀಲ ಮುಕುಲ್ ರೋಹ್ಟಗಿಯವರನ್ನು ಭೇಟಿಯಾಗುವುದಾಗಿ ಮಾಹಿತಿ ಕೊಟ್ಟರು.

ABOUT THE AUTHOR

...view details