ಬೆಂಗಳೂರು:ಲ್ಯಾಪ್ಟಾಪ್ ಬಾಡಿಗೆ ಪಡೆದು ವಾಪಸ್ ನೀಡದೆ ವಂಚಿಸುತ್ತಿದ್ದ ಚೋರನನ್ನು ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಮೂಲದ ಮುನಿ ಲೊಕೇಶ್ ಬಂಧಿತ ಆರೋಪಿ. ಪದವಿ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ವಂಚನೆಯನ್ನೇ ಕಸುಬು ಮಾಡಿಕೊಂಡಿದ್ದ ಈತ, ಆನ್‌ಲೈನ್ ಮೂಲಕ ಲ್ಯಾಪ್ಟಾಪ್ ಬಾಡಿಗೆಗೆ ನೀಡುವ ಕಂಪನಿಯನ್ನು ಸಂಪರ್ಕಿಸಿ ಆ್ಯಪಲ್ ಲ್ಯಾಪ್ಟಾಪ್ಗಳನ್ನು ಬಾಡಿಗೆ ಪಡೆಯುತ್ತಿದ್ದ. ಎರಡು-ಮೂರು ತಿಂಗಳು ಬಾಡಿಗೆ ಕಟ್ಟಿ ನಂತರ ಮಾರಾಟ ಮಾಡುತ್ತಿದ್ದನಂತೆ.