ಕರ್ನಾಟಕ

karnataka

ETV Bharat / state

ಯತ್ನಾಳ್ ಹೇಳಿಕೆ: ಚರ್ಚೆಗೆ ಅವಕಾಶ ನೀಡಲು ಸೂಚಿಸುವಂತೆ ಗವರ್ನರ್​​ಗೆ ಕಾಂಗ್ರೆಸ್​ ಮನವಿ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಧಾನಮಂಡಲ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ನೀಡಲು ಸ್ಪೀಕರ್​ಗೆ ನಿರ್ದೇಶನ ನೀಡುವಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಮನವಿ ಮಾಡಿದೆ.

congressional-delegation
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ

By

Published : Mar 4, 2020, 1:01 PM IST

ಬೆಂಗಳೂರು:ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಧಾನಮಂಡಲ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ನೀಡಲು ಸ್ಪೀಕರ್​ಗೆ ನಿರ್ದೇಶನ ನೀಡುವಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಮನವಿ ಮಾಡಿದೆ.

ಇಂದು ರಾಜಭವನಕ್ಕೆ ತೆರಳಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನೇತೃತ್ವದ ನಿಯೋಗ ಮನವಿ ಮಾಡಿದ್ದು, ಆರ್ಟಿಕಲ್ 175 ಅಡಿ ಚರ್ಚೆಗೆ ಹಾಗೂ ಶಾಸಕ ಯತ್ನಾಳ್ ಉಚ್ಚಾಟನೆಗೆ ಸೂಚಿಸುವ ಅವಕಾಶ ಇದೆ. ಈ ಪರಿಚಯದ ಅಡಿ ಅವಕಾಶ ಮಾಡಿಕೊಡುವಂತೆ ನಿಯೋಗ ರಾಜ್ಯಪಾಲ ವಜುಬಾಯಿ ವಾಲಾ ಅವರನ್ನ ಮನವಿ ಮಾಡಿದೆ.

ನಿಯೋಗದ ನೇತೃತ್ವ ವಹಿಸಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಯತ್ನಾಳ ಪಾಕಿಸ್ತಾನದ ಏಜೆಂಟ್ ಅವರು ಅಂತಾ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೇಳಿದ್ದು ಎಷ್ಟು ಸರಿ? ಈ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ರೆ ಸ್ಪೀಕರ್ ಕೊಡಲಿಲ್ಲ. ಇದರಿಂದ ಅನಿವಾರ್ಯವಾಗಿ ರಾಜ್ಯಪಾಲರನ್ನು ಭೇಟಿ ಮಾಡಬೇಕಾಯಿತು ಎಂದಿದ್ದಾರೆ.

ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಯತ್ನಾಳ್ ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ತಂದಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ದೊರೆಸ್ವಾಮಿಯವರು ಸಾಕ್ಷಿ ಪ್ರಜ್ಞೆ ಉಳ್ಳವರು. ಅವರೆಲ್ಲರ ಹೋರಾಟದ ನಿಮಿತ್ತ ನಾವೆಲ್ಲ ಸ್ವಾತಂತ್ರ್ಯದ ಫಲವನ್ನ ನಾವು ಅನುಭವಿಸುತ್ತಿದ್ದೇವೆ ಎಂದರು. ಆರ್ಟಿಕಲ್ 175 ಪರಿಚ್ಛೇದದ ಪ್ರಕಾರ ಸ್ಪೀಕರ್ ಅವರಿ ನಿರ್ದೇಶನ ನೀಡುವ ಅವಕಾಶ ಇದೆ. ಸ್ಪೀಕರ್ ಅವರಿಗೆ ನಾನು ನೋಟಿಸ್​ ಕೊಟ್ಟೆ ಅವರು ಚರ್ಚೆಗೆ ಆಹ್ವಾನ ಕೊಡಲಿಲ್ಲ. ಸಂವಿಧಾನದ ವಿರೋಧವಾಗಿ ನೆಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇವೆ. ಸಂವಿಧಾನ ನಿಯಮಗಳನ್ನು ನೋಡಿ ಪರಿಶೀಲನೆ ಮಾಡುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ. ಎಂದು ತಿಳಿಸಿದರು.

ಸದನದಲ್ಲಿ ಪಾಲ್ಗೊಳ್ಳುತ್ತೇವೆ, ನಾವು ಪ್ರತಿಭಟನೆಯನ್ನ ಕೈ ಬಿಡುತ್ತೇವೆ. ಕಲಾಪದಲ್ಲಿ ನಾವು ಭಾಗಿಯಾಗುತ್ತೇವೆ. ರಾಜ್ಯದಲ್ಲಿ ಸಾಕಷ್ಟು ಜಲ್ವಂತ ಸಮಸ್ಯೆಗಳಿವೆ. ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮಂಡನೆಯಾಗಿದೆ. ಅದರ ಬಗ್ಗೆ ಚರ್ಚೆ ಮಾಡಬೇಕು. ಹೀಗಾಗಿ ಸದನದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ABOUT THE AUTHOR

...view details