ಬೆಂಗಳೂರು: ಆಶಾ ಕಾರ್ಯಕರ್ತೆಯರ ತಂಡ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ರನ್ನು ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತನ್ನಿ.. ಆಶಾ ಕಾರ್ಯಕರ್ತೆಯರಿಂದ ಡಿಕೆಶಿಗೆ ಮನವಿ - ಕೆಪಿಸಿಸಿ ಡಿ.ಕೆ ಶಿವಕುಮಾರ್
ನಿಮ್ಮ ಬೇಡಿಕೆಯನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಜ್ಞಾಪಿಸುವ ಕಾರ್ಯ ಮಾಡುತ್ತೇನೆ. ನಿಮ್ಮ ನ್ಯಾಯಯುತ ಹೋರಾಟಕ್ಕೆ ಪ್ರತಿಪಕ್ಷದ ಬೆಂಬಲ ಇರಲಿದೆ..
ಮೂರು ತಿಂಗಳ ತಮ್ಮ ವೇತನವನ್ನು ಬಿಡುಗಡೆ ಮಾಡಬೇಕು, ಎನ್ಪಿಎಸ್ ಬದಲು ಎಲ್ಐಸಿ ಆಧಾರಿತ ಪಿಂಚಣಿ ಯೋಜನೆ ಜಾರಿಗೆ ಮಾಡುವುದು ಹಾಗೂ ಉದ್ಯೋಗಿಗಳು ವೇತನದ ಶೇ.10ರಷ್ಟು ವಂತಿಗೆ ಹಾಗೂ ಇಲಾಖೆಯಿಂದ ಅಷ್ಟೇ ವಂತಿಗೆ ನೀಡುವುದು. ಅಲ್ಲದೆ ನಿವೃತ್ತಿಯಾದವರಗೆ ಕನಿಷ್ಠ 3000 ರೂ. ಮಾಸಿಕ ಪಿಂಚಣಿ ನೀಡಬೇಕು. ಮೂರು ವರ್ಷದಿಂದ ನಿವೃತ್ತಿಯಾದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಡಿಗಂಟು, ಎನ್ಪಿಎಸ್ ಹಣ ಬಿಡುಗಡೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಡಿಕೆಶಿ, ನಿಮ್ಮ ಬೇಡಿಕೆಯನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಜ್ಞಾಪಿಸುವ ಕಾರ್ಯ ಮಾಡುತ್ತೇನೆ. ನಿಮ್ಮ ನ್ಯಾಯಯುತ ಹೋರಾಟಕ್ಕೆ ಪ್ರತಿಪಕ್ಷದ ಬೆಂಬಲ ಇರಲಿದೆ ಎಂದು ಎಂದು ಭರವಸೆ ಇತ್ತರು. ಈ ವೇಳೆ ರಾಜ್ಯಾದ್ಯಾಂತ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿರುವ 'ಆರೋಗ್ಯ ಹಸ್ತ' ಕಾರ್ಯಕ್ರಮಕ್ಕಾಗಿ ಖರೀದಿ ಮಾಡಿರುವ ಥರ್ಮಲ್ ಸ್ಕ್ಯಾನರ್, ಆ್ಯಕ್ಸಿಮೀಟರ್, ಸ್ಯಾನಿಟೈಸರ್ ಸೇರಿ ವಿವಿಧ ಸಲಕರಣೆಗಳನ್ನು ಡಿಕೆಶಿ ಪರಿಶೀಲಿಸಿದ್ದಾರೆ.