ಬೆಂಗಳೂರು:ಲಾಕ್ಡೌನ್ನಿಂದ ಬಡ ಅರ್ಚಕರಿಗೆ ಜೀವನ ಕಷ್ಟದಾಯಕವಾಗಿದ್ದು, ಪರಿಹಾರ ಘೋಷಿಸುವಂತೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಸಿಎಂ ಅವರಲ್ಲಿ ಮನವಿ ಮಾಡಿದರು.
ಬಡ ಅರ್ಚಕರಿಗೂ ಲಾಕ್‌ಡೌನ್ ಪರಿಹಾರ ಘೋಷಿಸುವಂತೆ ಸಿಎಂಗೆ ಮನವಿ - priests related News
ಲಾಕ್‌ಡೌನ್ ಕಾರಣ ಯಾವುದೇ ಸಮಾರಂಭ ನಡೆಯುತ್ತಿಲ್ಲ. ಹೀಗಾಗಿ ಬಡ ಅರ್ಚಕರಿಗೆ ಜೀವನ ಕಷ್ಟವಾಗಿದೆ. ಬಡ ಅರ್ಚಕರಿಗೆ ಪರಿಹಾರ ಘೋಷಿಸುವಂತೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಭೇಟಿ ವೇಳೆ ಮಾತನಾಡಿದ ಅವರು, ಲಾಕ್‌ಡೌನ್ ಕಾರಣ ಯಾವುದೇ ಸಮಾರಂಭ ನಡೆಯುತ್ತಿಲ್ಲ. ಹೀಗಾಗಿ ಬಡ ಅರ್ಚಕರಿಗೆ ಜೀವನ ಕಷ್ಟವಾಗಿದೆ. ಹೀಗಾಗಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿಎಂ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ, ಅರ್ಚಕರು, ಪೂಜಾರಿಗಳಿಗೆ ಪರಿಹಾರ ಘೋಷಿಸಿಲ್ಲ. ಬ್ರಾಹ್ಮಣ ಹಾಗೂ ಲಿಂಗಾಯತರಲ್ಲಿಯೂ ಪುರೋಹಿತರಿದ್ದಾರೆ. ಲಾಕ್‌ಡೌನ್ ಕಾರಣ ಯಾವುದೇ ಸಮಾರಂಭ ನಡೆಯುತ್ತಿಲ್ಲ. ಹೀಗಾಗಿ ಬಡ ಅರ್ಚಕರಿಗೆ ಜೀವನ ಕಷ್ಟವಾಗಿದೆ. ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಈ ವೇಳೆ ಸಿಎಂ, ಕೆಲವು ಬಿಟ್ಟು ಹೋದ ಸಮುದಾಯಗಳನ್ನು ಸೇರಿಸುವ ಭರವಸೆ ನೀಡಿದ್ದಾರೆ ಎಂದರು.