ಬೆಂಗಳೂರು:ಸಿಎಂ ಬಿಎಸ್ವೈಗೆ ಇದೀಗ ಮತ್ತೊಂದು ಜಿಲ್ಲಾ ರಚನೆಯ ಟೆನ್ಷನ್ ಶುರುವಾಗಿದೆ. ಬಳ್ಳಾರಿಯ ಹರಪನಹಳ್ಳಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಅಂತ ಸಿಎಂ ಯಡಿಯೂರಪ್ಪ ಅವರಿಗೆ ಶಾಸಕ ಕರುಣಾಕರ್ ರೆಡ್ಡಿ ನೇತೃತ್ವದ ನಿಯೋಗ ಮನವಿ ಮಾಡಿದೆ.
ಆ ಮೂಲಕ ಆನಂದ್ ಸಿಂಗ್ಗೆ ತಿರುಗೇಟು ನೀಡಲು ಕರುಣಾಕರ ರೆಡ್ಡಿ ಮುಂದಾಗಿದ್ದಾರೆ. ಆನಂದ್ ಸಿಂಗ್ ಈಗಾಗಲೇ ವಿಜಯನಗರ ಜಿಲ್ಲೆ ರಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಸಕ ಕರುಣಾಕರ ರೆಡ್ಡಿ ಹರಪನಹಳ್ಳಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.