ಕರ್ನಾಟಕ

karnataka

ETV Bharat / state

ಮೋದಿ, ಶಾ ಮೇಲೆ ಭರವಸೆ ಇಲ್ಲ,  ಬಿಎಸ್​ವೈ ಮೇಲೆ ಗೌರವ ಇದೆ: ಸಿ.ಎಂ.ಇಬ್ರಾಹಿಂ - ಸಿಎಎ ಕುರಿತು ಸಿಎಂ ಜೊತೆ ಚರ್ಚೆ

ಪ್ರಧಾನಿ ಮೋದಿ, ಅಮಿತ್ ಶಾ ಮೇಲೆ ಭರವಸೆ ಇಲ್ಲ. ಆದರೆ, ಯಡಿಯೂರಪ್ಪರ ಮೇಲೆ ಗೌರವ, ವಿಶ್ವಾಸವಿದೆ. ಸಿಎಎ, ಎನ್​ಆರ್​ಸಿ ವಿರುದ್ಧದ ಶಾಂತಿಯುವ ಪ್ರತಿಭಟನೆಗೆ ಅನುಮತಿ ನೀಡುವಂತೆ ಸಿಎಂ ಜತೆ ಚರ್ಚಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ‌.ಇಬ್ರಾಹಿಂ ಹೇಳಿದರು.

farmer mal cm ibrahim
ಸಿ.ಎಂ.ಇಬ್ರಾಹಿಂ

By

Published : Jan 10, 2020, 6:17 PM IST

ಬೆಂಗಳೂರು: ಪ್ರಧಾನಿ ಮೋದಿ, ಅಮಿತ್ ಶಾ ಮೇಲೆ ಭರವಸೆ ಇಲ್ಲ. ಆದರೆ, ಯಡಿಯೂರಪ್ಪರ ಮೇಲೆ ಗೌರವ, ವಿಶ್ವಾಸವಿದೆ. ಸಿಎಎ, ಎನ್​ಆರ್​ಸಿ ವಿರುದ್ಧದ ಶಾಂತಿಯುವ ಪ್ರತಿಭಟನೆಗೆ ಅನುಮತಿ ನೀಡುವಂತೆ ಸಿಎಂ ಜತೆ ಚರ್ಚಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ‌.ಇಬ್ರಾಹಿಂ ಹೇಳಿದರು.

ಸಿ.ಎಂ.ಇಬ್ರಾಹಿಂ

ವಿಧಾನಸೌಧದಲ್ಲಿ ಮಂಗಳೂರು ಗಲಭೆ ಕುರಿತು ಎಚ್.ಡಿ.ಕೆ ಸಿಡಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಸಿಎಎ ವಿರುದ್ಧ ಮಂಗಳೂರು ಮಾತ್ರವಲ್ಲದೇ ಬೇರೆ, ಬೇರೆ ಕಡೆ ಪ್ರತಿಭಟನೆ ನಡೆದಿದೆ. ಆದರೆ, ಮಂಗಳೂರಿನಲ್ಲೇ ಯಾಕೆ ಗೋಲಿಬಾರ್ ನಡೆಯಿತು? ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಮಂಗಳೂರಿನಲ್ಲಿ ಪರ್ಯಾಯ ಆಡಳಿತವಿದೆ. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಿದರು.

ಯಡಿಯೂರಪ್ಪನವರೂ ಹೇಗೆ ಅನ್ನೋದು ಎಲ್ಲರಿಗೂ ಗೊತ್ತಿದೆ‌. ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ಅಂತಾ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details