ಬೆಂಗಳೂರು: ಯಾರು ಬೇಕಾದರೂ ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಬಹುದು. ಆದರೆ, ಅದು ಸ್ವೀಕಾರ ಆಗುತ್ತೋ ಇಲ್ವೋ ಅನ್ನೋದು ಮುಂದಿರುವ ಪ್ರಶ್ನೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಅನರ್ಹರೂ ಕೂಡ ಉಪ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಬಹುದು.. ಚುನಾವಣಾ ಆಯೋಗ ಸ್ಪಷ್ಟನೆ - karnataka disqualifies MLAs
ಉಪ ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದ ಅನರ್ಹ ಶಾಸಕರಲ್ಲಿ ಭಯ ಉಂಟಾಗಿತ್ತು. ಇದೀಗ ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾರು ಬೇಕಾದರೂ ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಬಹುದು. ಆದರೆ, ಅವರ ನಾಮಪತ್ರ ಸ್ವೀಕಾರ ಆಗುತ್ತೋ ಇ್ಲಲವೋ ಎಂಬುದು ಮುಂದಿನ ವಿಚಾರ ಎಂದಿದ್ದಾರೆ.
ಶೇಷಾದ್ರಿ ರಸ್ತೆಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅನರ್ಹ ಶಾಸಕರ ಕೋರ್ಟ್ ವಿಚಾರವನ್ನು ನಾವು ಹೇಳಲು ಸಾಧ್ಯವಿಲ್ಲ. ಕೋರ್ಟ್ ನಲ್ಲಿ ಅವರ ಪ್ರಕರಣ ಇದೆ. ನಾನು ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಇದರ ಬಗ್ಗೆ ಪರಿಶೀಲಿಸಿ ಮುಂದಿನ ಮಾಹಿತಿ ಒದಗಿಸುತ್ತೇನೆ ಎಂದರು.
ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಮುಂದಿನ ವರ್ಷ ಚುನಾವಣೆ ಇದೆ. ಇದಕ್ಕಾಗಿ ಚುನಾವಣೆ ನಿಯಮ ಪರಿಷ್ಕರಣೆ ಮಾಡಲಾಗುತ್ತಿದೆ. ಪಬ್ಲಿಕ್ ನೋಟಿಸ್ ಕೊಡಲು ಅ.1 ಹಾಗೂ ಎಲೆಕ್ಟ್ರಲ್ ರೋಲ್ ಪಬ್ಲಿಕೇಷನ್ ಗೆ ಡಿ.30 ದಿನಾಂಕವನ್ನು ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.