ಕರ್ನಾಟಕ

karnataka

ETV Bharat / state

ವಕ್ಫ್ ಮಂಡಳಿ ಅಕ್ರಮದ ವಿರುದ್ಧ ಹೋರಾಟ; ಅನ್ವರ್ ಮಾಣಿಪ್ಪಾಡಿ - anwar manpadi complaint against mla tanveer sett

ರಾಜ್ಯದ ವಕ್ಫ್ ಮಂಡಳಿ ನಡೆಸಿರುವ ಅಕ್ರಮ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಾಡಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

anwar manpadi letter to central government
ಅಧ್ಯಕ್ಷ ಅನ್ವರ್ ಮಾನ್ಪಾಡಿ ಪತ್ರ

By

Published : Nov 30, 2020, 10:14 AM IST

ಬೆಂಗಳೂರು: ವಕ್ಫ್‌ ಮಂಡಳಿಯನ್ನು ತಕ್ಷಣವೇ ಅಮಾನತಿನಲ್ಲಿ ಇರಿಸಿ ಮಂಡಳಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಗಳನ್ನು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಾಡಿ ಪತ್ರ ಬರೆದಿದ್ದಾರೆ.

ಅಧ್ಯಕ್ಷ ಅನ್ವರ್ ಮಾನ್ಪಾಡಿ ಪತ್ರ

ರಾಜ್ಯದ ವಕ್ಫ್ ಮಂಡಳಿ ನಡೆಸಿರುವ ಅಕ್ರಮ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್​​ಗೆ ಅನ್ವರ್‌ ಮಾಣಿಪ್ಪಾಡಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಅಲ್ಲದೇ ಅಕ್ರಮದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಅಧ್ಯಕ್ಷ ಅನ್ವರ್ ಮಾನ್ಪಾಡಿ ಪತ್ರ
ಅಧ್ಯಕ್ಷ ಅನ್ವರ್ ಮಾನ್ಪಾಡಿ ಪತ್ರ
ಶಾಸಕ ತನ್ವೀರ್‌ ಸೇಠ್‌ ವಿರುದ್ಧವೂ ಅನ್ವರ್ ಮಾನ್ಪಾಡಿ ದೂರು:

ಮೈಸೂರಿನ ಮಜ್ಲೀಸ್‌–ಇ– ರಿಫಾಹುಲ್‌ ಮುಸ್ಲಿಮೀನ್‌ ಬಾಲಕರು ಮತ್ತು ಬಾಲಕಿಯರ ಅನಾಥಾಶ್ರಮಕ್ಕೆ ಸಂಬಂಧಪಟ್ಟಂತೆ 2008ರಲ್ಲಿ ತಾತ್ಕಾಲಿಕ ಆಡಳಿತ ಮಂಡಳಿಯು ಸಂಸ್ಥೆಯ ಆಸ್ತಿಗಳನ್ನು ಅಡಮಾನ ಇರಿಸಿ ಕೆನರಾ ಬ್ಯಾಂಕ್‌ನಲ್ಲಿ ₹ 8.5 ಕೋಟಿ ಸಾಲ ಪಡೆದಿತ್ತು. ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಸಲು ಬಡ್ಡಿ ಸೇರಿ 32 ಕೋಟಿ ಬಾಕಿಯಾಗಿದೆ. ಶಾಸಕ ತನ್ವೀರ್‌ ಸೇಠ್‌ ಮತ್ತು ಅವರ ತಂದೆ ಅಜೀಜ್‌ ಸೇಠ್‌ ಈ ಹಗರಣದ ರೂವಾರಿಗಳು. ಆಡಳಿತ ಮಂಡಳಿಯ ದಿಕ್ಕುತಪ್ಪಿಸಿ ಹಗರಣ ಎಸಗಿದ್ದಾರೆ ಎಂದು ಪತ್ರದಲ್ಲಿ ಆರೋಪ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕ್ರಮವನ್ನು ಅನ್ವರ್ ಮಣಿಪ್ಪಾಡಿ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ, ರಾಜ್ಯ ಅಲ್ಪ ಸಂಖ್ಯಾತರ ಆಯೋಗಕ್ಕೂ ಬಿಜೆಪಿಯವರೇ ಅಧ್ಯಕ್ಷರಾಗಿದ್ದಾರೆ ಆದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸುವ ಇಲ್ಲವೇ ಸರ್ಕಾರವನ್ನು ಸಂಪರ್ಕ ಮಾಡುವ ಬದಲು ಅನ್ವರ್​​ ಪತ್ರ ಬರೆದಿರುವುದು ಅಚ್ಚರಿ ಮೂಡಿಸಿದೆ.

ABOUT THE AUTHOR

...view details