ಚೆನ್ನೈ(ತಮಿಳುನಾಡು): ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾಯಕ ಬಾಹುಬಲಿ-ದೇವಸೇನಾ ಆಗಿ ಅಭಿಮಾನಿಗಳ ಮೆಚ್ಚುಗೆ ಪಡೆದ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್, ಬಾಹುಬಲಿ ಚಿತ್ರದ ನಂತರ ಹೆಚ್ಚು ಅಭಿಮಾನಿಗಳನ್ನು ಸೆಳೆದಿದ್ದಾರೆ. ಆ ಚಿತ್ರದಲ್ಲಿ ಅವರಿಬ್ಬರ ಅಭಿನಯ ಮೆಚ್ಚಿದ ಸಿನಿರಸಿಕರು ಅವರು ಮದುವೆಯಾಗುತ್ತಾರೆ ಎಂದು ಗುಲ್ಲೆಬ್ಬಿಸಿದ್ದು ಉಂಟು.
ನಾಯಕ ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಆದರೆ, ಅನುಷ್ಕಾ ಶೆಟ್ಟಿ ಸಂದರ್ಶನವೊಂದರಲ್ಲಿ ಪ್ರಭಾಸ್ ಜೊತೆಗಿನ ಸಂಬಂಧದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. 'ನಾನು ಪ್ರಭಾಸ್ 15 ವರ್ಷಗಳಿಂದ ಒಳ್ಳೆಯ ಸ್ನೇಹಿತರು. ನಸುಕಿನಜಾವ 3 ಗಂಟೆಗೆ ಕರೆ ಮಾಡಿದರೂ ಸಿಗುತ್ತಾರೆ. ಅಷ್ಟೊಂದು ಗಟ್ಟಿಯಾದ ಗೆಳೆತನ ನಮ್ಮಲ್ಲಿದೆ. ನಮ್ಮಿಬ್ಬರ ನಡುವೆ ಪ್ರೇಮ ಸಂಬಂಧ ಇದ್ದಿದ್ದರೆ, ಅದು ಇಷ್ಟೊತ್ತಿಗೆ ಬಹಿರಂಗವಾಗುತ್ತಿತ್ತು. ಆದರೆ, ಆ ತರಹದ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ಬಾಹುಬಲಿ ಚಿತ್ರವಲ್ಲದೇ, ಪ್ರಭಾಸ್ ಜೊತೆ ಬಿಲ್ಲಾ (2009) ಮತ್ತು ಮಿರ್ಚಿ (2013) ಚಿತ್ರಗಳಲ್ಲಿ ನಟಿಸಿದ್ದೇನೆ. 2019 ರಲ್ಲಿ ಮುಂಬೈ ಮಿರರ್ ಪ್ರಕಟಣೆಯಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಒಬ್ಬರನ್ನೊಬ್ಬರು ಮೆಚ್ಚಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ಮನೆ ಖರೀದಿಸಲು ಮುಂದಾಗಿದ್ದಾರೆ ಎಂದು ಲೇಖನವೊಂದು ಪ್ರಕಟವಾಗಿತ್ತು. ನಂತರ ರಿಯಾಲಿಟಿ ಶೋನಲ್ಲಿ, ಅನುಷ್ಕಾ ತನಗೆ ಒಳ್ಳೆಯ ಗೆಳತಿ ಎಂದು ಟಾಲಿವುಡ್ ರೆಬಲ್ ಸಹ ಹೇಳಿದ್ದರು.
ಸದ್ಯ ನಟಿ ಅನುಷ್ಕಾ ತಮ್ಮ ನಿಶ್ಯಬ್ಧ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಹೇಮಂತ್ ಮಾಧುರ್ಕರ್ ನಿರ್ದೇಶನದ ಈ ಚಿತ್ರದಲ್ಲಿ ಮಾಧವನ್, ಅಂಜಲಿ, ಕಿಲ್ ಬಿಲ್ ವಿರೋಧಿ ಮೈಕೆಲ್ ಮ್ಯಾಡ್ಸೆನ್ ಮತ್ತು ಶಾಲಿನಿ ಪಾಂಡೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಪ್ರಭಾಸ್ ಕೂಡಾ ತಮ್ಮ 20ನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.