ಬೆಂಗಳೂರು :ಪ್ರಕೃತಿ ಸಹಜ ಕ್ರಿಯೆಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಇಂದು ಬಹುತೇಕರು ಮನೆಯಿಂದ ಹೊರ ಬರಲಿಲ್ಲ. ಜತೆಗೆ ಕೆಲ ಮೌಢ್ಯಗಳನ್ನ ಆಚರಿಸಿರೋದು ಕೂಡ ನಡೆದಿದೆ. ಆದರೆ, ಮೂಢನಂಬಿಕೆ ವಿರೋಧಿ ಒಕ್ಕೂಟದ ಮುಖಂಡರು ಇವತ್ತು ಗ್ರಹಣದ ವೇಳೆಯೇ ಊಟ ಮಾಡೋದು ಸೇರಿ ಒಂದಿಷ್ಟು ಕಂದಾಚಾರಗಳನ್ನ ಮುರಿದರು.
ಗ್ರಹಣ ಕಾಲದಲ್ಲಿ ಆಹಾರ ಸೇವಿಸಿ ಮೂಢನಂಬಿಕೆ ವಿರುದ್ಧ ಹೋರಾಟ..
ಮೂಢನಂಬಿಕೆ ತೊಲಗಲಿ, ಮೂಢನಂಬಿಕೆಯನ್ನು ನಂಬಿ ಪೇಚಾಟಕ್ಕೆ ಸಿಲುಕದಿರಿ ಎಂದು ಒಕ್ಕೂಟದವರು ಮೌರ್ಯ ಸರ್ಕಲ್ ಬಳಿ ಆಹಾರ ಸೇವನೆ ಮಾಡಿದ್ದಾರೆ..
ಆಹಾರ ಸೇವನೆ ಮಾಡಿದ ಮೂಢನಂಬಿಕೆ ವಿರೋಧಿ ಒಕ್ಕೂಟ
ಗ್ರಹಣದ ವೇಳೆ ಕೆಲ ಆಚರಣೆಗಳನ್ನ ಮಾಡೋದೆ ಮೂಢನಂಬಿಕೆ. ಇದನ್ನು ನಂಬಬಾರದು ಎಂದು ಹೇಳಿದ ಮೂಢನಂಬಿಕೆ ವಿರೋಧಿ ಒಕ್ಕೂಟದ ಮುಖಂಡರು, ವಿಜ್ಞಾನದೆಡೆಗೆ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ಮೂಢನಂಬಿಕೆ ವಿರೋಧಿಸಿದ್ದಾರೆ.
ಮೂಢನಂಬಿಕೆ ತೊಲಗಲಿ, ಮೂಢನಂಬಿಕೆಯನ್ನು ನಂಬಿ ಪೇಚಾಟಕ್ಕೆ ಸಿಲುಕದಿರಿ ಎಂದು ಒಕ್ಕೂಟದವರು ಮೌರ್ಯ ಸರ್ಕಲ್ ಬಳಿ ಆಹಾರ ಸೇವನೆ ಮಾಡಿದ್ದಾರೆ.