ಬೆಂಗಳೂರು:ಅಮೂಲ್ಯ ಲಿಯೋನ್ ದೇಶದ್ರೋಹ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಹಾಗೂ ಎಸ್ಐಟಿ ನೇತೃತ್ವದ ತನಿಖಾ ತಂಡ ತನಿಖೆ ಚುರುಕುಗೊಳಿಸಿದೆ.
ತನಿಖೆ ಯಾವೆಲ್ಲಾ ರೀತಿ ನಡೆಯಲಿದೆ?
ಬೆಂಗಳೂರು:ಅಮೂಲ್ಯ ಲಿಯೋನ್ ದೇಶದ್ರೋಹ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಹಾಗೂ ಎಸ್ಐಟಿ ನೇತೃತ್ವದ ತನಿಖಾ ತಂಡ ತನಿಖೆ ಚುರುಕುಗೊಳಿಸಿದೆ.
ತನಿಖೆ ಯಾವೆಲ್ಲಾ ರೀತಿ ನಡೆಯಲಿದೆ?
ಪೌರತ್ವ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನ್ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಳು. ಹೀಗಾಗಿ ಅಮೂಲ್ಯ ಸೋಶಿಯಲ್ ಮೀಡಿಯಾವನ್ನ ಯಾವ ರೀತಿಯಾಗಿ ಬಳಸಿಕೊಂಡಿದ್ದಾಳೆ..? ಎಷ್ಟು ವರ್ಷದಿಂದ ಸೋಶಿಯಲ್ ಮೀಡಿಯಾವನ್ನು ಸಕ್ರಿಯವಾಗಿ ಬಳಕೆ ಮಾಡ್ತಿದ್ದಳು..! ಯಾವೆಲ್ಲಾ ಪ್ರಚೋದನಕಾರಿ ಭಾಷಣ ಮಾಡಿದ್ದಾಳೆ..! ಭಾಷಣದ ಹಿಂದಿರೋ ಕಾಣದ ಕೈಗಳ್ಯಾರು..? ನಕ್ಸಲರ ಸಂಪರ್ಕದಲ್ಲೇನಾದ್ರೂ ಅಮೂಲ್ಯ ಇದ್ದಿರಬಹುದಾ..? ಕಾರ್ಯಕ್ರಮಕ್ಕೆ ಅಮೂಲ್ಯಾಳನ್ನ ಯಾವ ವ್ಯಕ್ತಿ ಬರುವಂತೆ ಕೇಳಿಕೊಂಡಿದ್ದರು.? ಆಕೆಯ ಮೊಬೈಲ್ ಕಾಲ್ ಲೀಸ್ಟ್ ನಲ್ಲಿ ಯಾವೆಲ್ಲ ವ್ಯಕ್ತಿಗಳನ್ನ ಸಂಪರ್ಕಿಸಿದ್ದಳು.. ಈ ಹಿಂದೆ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದಳಾ..? ಪ್ರಚೋದನಕಾರಿ ಭಾಷಣ ಮಾಡಿದ್ರೆ ಅಮೂಲ್ಯಳಿಗೆ ಏನು ಪ್ರಯೋಜನ..? ಹಣದ ಆಮಿಷ ತೋರಿಸಿ ಅಮೂಲ್ಯಳನ್ನ ಬುಟ್ಟಿಗೆ ಹಾಕಿಕೊಳ್ಳಲಾಯ್ತಾ..?
ಈ ಎಲ್ಲಾ ವಿಚಾರಗಳ ಸಂಪೂರ್ಣ ಮಾಹಿತಿಯನ್ನ ಇಬ್ಬರು ಇನ್ಸ್ ಪೆಕ್ಟರ್ ಗ್ರೌಂಡ್ ವರ್ಕ್ ಅಂದ್ರೆ ಡಾಕ್ಯುಮೆಂಟ್ಸ್ ಗಳನ್ನ ಕಲೆಹಾಕಿ ತನಿಖೆ ನಡೆಸುತ್ತಿದ್ದಾರೆ. ಇನ್ನೊಬ್ಬ ಇನ್ಸ್ ಪೆಕ್ಟರ್ ಟೆಕ್ನಿಕಲ್ ವಿಚಾರದಲ್ಲಿ ದಾಖಲೆಗಳನ್ನ ಕ್ರೋಢೀಕರಿಸೋಕೆ ಶುರುಮಾಡಿದ್ದಾರೆ. ಸದ್ಯ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ತನಿಖಾ ತಂಡ ಅಮೂಲ್ಯ ಜೊತೆ ಸಂಪರ್ಕ ಹೊಂದಿದ್ದ ಪ್ರತಿಯೊಬ್ಬರ ವಿಚಾರಣೆ ನಡೆಸಲು ನಿರ್ಧಾರ ಮಾಡಿದ್ದಾರೆ.