ಬೆಂಗಳೂರು:ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪೀಪಲ್ಸ್ ಫ್ರಂಟ್‌ನ ಮುಖಂಡರು, ಗೋಲಿಬಾರ್ನಲ್ಲಿ ಇಬ್ಬರು ಯುವಕರು ಮೃತಪಟ್ಟಿರುವುದು ಅಂತ್ಯಂತ ದು:ಖಕರ. ಈ ಘಟನೆಗೆ ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷಅವರೇ ನೇರ ಹೊಣೆಯಾಗುತ್ತಾರೆ ಎಂದು ಆರೋಪಿಸಿದರು.
'ಮಂಗಳೂರು ಪೊಲೀಸ್ ಗೋಲಿಬಾರ್ಗೆ ಕಮೀಷನರ್ ನೇರ ಹೊಣೆ'.. - Anti-fascist People's Front news conference
ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ತೀವ್ರವಾಗಿ ಖಂಡಿಸಿದೆ..
ಆ್ಯಂಟಿ ಫ್ಯಾಸ್ಟಿಸ್ಟ್ ಪೀಪಲ್ಸ್ ಫ್ರಂಟ್ ಸುದ್ದಿಗೋಷ್ಠಿ
ಕಳೆದ ಹಲವಾರು ದಿನಗಳಿಂದ ಪ್ರತಿಭಟನೆಗೆ ಅವಕಾಶ ನೀಡದೇ, ನಗರದಲ್ಲಿ ಸೆಕ್ಷನ್ 144 ಹೆಸರಿನಲ್ಲಿ ಜನತೆಯ ಮೇಲೆ ಪೊಲೀಸರು ಲಾಠಿಚಾರ್ಜ್ ಹಾಗೂ ಗೋಲಿಬಾರ್ ಮೂಲಕ ಭೀಕರ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದರು.
ಈ ಕುರಿತು ಸಮಗ್ರವಾಗಿ ತನಿಖೆಯಾಗಬೇಕು. ಮೃತಪಟ್ಟವರ ಕುಟುಂಬಕ್ಕೆ ತಲಾ 1 ಕೋಟಿ ರೂ. ಹಾಗೂ ಗಾಯಾಳುಗಳಿಗೆ 25 ಲಕ್ಷ ರೂ. ಪರಿಹಾರನೀಡಬೇಕೆಂದು ಒತ್ತಾಯಿಸಿದರು. ಹಾಗೂ ಈ ಘಟನೆಗೆ ಕಾರಣರಾದ ಕಮೀಷನರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.