ಬೆಂಗಳೂರು:ಕಾಂಗ್ರೆಸ್ ಪಕ್ಷದವರಿಗೆ ಗೋಹತ್ಯೆ ನಿಷೇಧದ ಮಸೂದೆ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇಲ್ಲ. ಸದನದಲ್ಲಿ ಚರ್ಚೆ ಮಾಡದೆ ರಾಜಕೀಯ ಮಾಡಿದ್ದಾರೆ ಎಂದು ಗೃಹ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಗೋವು ರಕ್ಷಕರಾಗಿ ಕೆಲಸ ಮಾಡುತ್ತಿದ್ದೇವೆ. ಅವರು (ಕಾಂಗ್ರೆಸ್ನವರು) ದನ ಕೊಲ್ಲುವವರು, ನಾವು ದನ ಕಾಯುವವರು. ಸಂವಿಧಾನದ ಆಸೆಯದಂತೆ ನಾವು ಮಸೂದೆ ಪಾಸ್ ಮಾಡಿದ್ದೇವೆ ಎಂದರು.
ಅಂಜೆಡಾ ಪ್ರಕಾರ ಈ ಕಾಯ್ದೆ ಇವತ್ತು ಅಂಗೀಕಾರ ಆಗಿದೆ. ಕಲಾಪದಲ್ಲಿ ಮೂರು ಗಂಟೆ ಚರ್ಚೆ ನಡೆದಿದೆ. ಪ್ರಜಾಪ್ರಭುತ್ವದಲ್ಲಿ ಚರ್ಚೆ ಬಹಳ ಅಗತ್ಯ. ಅವರು ಪದೇ ಪದೇ ಇದನ್ನ ವಿರೋಧ ಮಾಡುತ್ತಲೇ ಬಂದಿದ್ದರು. ಅವರದ್ದು ಮಸೂದೆ ಪಾಸ್ ಆಗಬಾರದೆಂಬ ಉದ್ದೇಶ ಇತ್ತು. ಈ ಹಿಂದೆ ಪೀಠಕ್ಕೆ ಹೋಗಿ ಎದರಿಸುವಂತೆ ಇವತ್ತು ಮಾಡಿದ್ದಾರೆ. ಉಪ ಸಭಾಪತಿಗಳು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.