ಕರ್ನಾಟಕ

karnataka

ETV Bharat / state

'ಉತ್ತರ ಕೊಡಿ ಶಾ’ ಅಭಿಯಾನ... ರಾಜ್ಯ ಕಾಂಗ್ರೆಸ್​​ನಿಂದ ಸರಣಿ ಟ್ವೀಟ್​​​ - ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಲೆಟೆಸ್ಟ್ ನ್ಯೂಸ್

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಪಕ್ಷ 'ಉತ್ತರ ಕೊಡಿ ಶಾ’ ಅಭಿಯಾನ ಆರಂಭಿಸಿದ್ದು, ಸರಣಿ ಟ್ವೀಟ್​ ಮಾಡಿದೆ.

"Answer to us Shah'' ....... State Congress series tweet!
“ಉತ್ತರ ಕೊಡಿ ಶಾ’.......ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್

By

Published : Jan 18, 2020, 1:01 PM IST

ಬೆಂಗಳೂರು:ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಪಕ್ಷ 'ಉತ್ತರ ಕೊಡಿ ಶಾ’ ಅಭಿಯಾನ ಆರಂಭಿಸಿದ್ದು, ಸರಣಿ ಟ್ವೀಟ್​ ಮಾಡಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಅಮಿತ್ ಶಾ ಅವರೇ, ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿವಾದ ಬಗೆಹರಿಯಲಿದೆ ಎಂದಿದ್ದಿರಿ. ಗೋವಾ ಸಿಎಂ ನೀರು ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಇದೆಲ್ಲಾ ಕೇವಲ ಚುನಾವಣಾ ಕುತಂತ್ರವೇ? ಇನ್ನೂ ಮಹದಾಯಿ ವಿವಾದ ಬಗೆಹರಿಸಲಿಲ್ಲವೇಕೆ? ಉತ್ತರ ಕೊಡಿ ಶಾ ಎಂದು ಕೇಳಿದೆ.

ನೆರೆ ಪರಿಹಾರವೇಕಿಲ್ಲ?
ಭೀಕರ ನೆರೆ ಸಮೀಕ್ಷೆಗೆ "ಗಿಮಿಕ್ ಭೇಟಿ" ಕೊಟ್ಟಿರಿ, ನಿಮ್ಮ ನೆರೆ ವೀಕ್ಷಣೆಯ ಫಲವೇನು? ರಾಜ್ಯಕ್ಕಾಗಿರುವ ನಷ್ಟ 35,500 ಕೋಟಿ ರೂ. ಕೇಂದ್ರ ಕೊಟ್ಟಿರುವ ಪರಿಹಾರ ಚಿಲ್ಲರೆ 1869 ಕೋಟಿ ರೂ. ರಾಜ್ಯಕ್ಕೆ ಕೇಂದ್ರದಿಂದ ಈ ರೀತಿಯ ವಂಚನೆ ಮಾಡುತ್ತಿರುವುದೇಕೆ? ಅಗತ್ಯ ನೆರೆ ಪರಿಹಾರ ಕೊಡುವುದಿಲ್ಲವೇ ಎಂದು ನೇರವಾಗಿ ಪ್ರಶ್ನಿಸಿದೆ.

ಅಮಿತ್ ಶಾ ಅವರೇ, ರಾಜ್ಯ ಬಿಜೆಪಿ ಸರ್ಕಾರದ ಗೂಂಡಾಗಿರಿ ಮಿತಿ ಮೀರಿದೆ. ಮಂಗಳೂರು ಗೋಲಿಬಾರ್, ಇತಿಹಾಸಕಾರ ರಾಮಚಂದ್ರ ಗುಹಾರಿಗೆ ಅವಮಾನಿಸಿದ್ದು, ಜ್ಯೋತಿ ನಿವಾಸ್ ಕಾಲೇಜ್ ಪ್ರಕರಣ, ಶಾಸಕ ವಿಶ್ವನಾಥ್ ಕಲಾ ಸಂಸ್ಥೆಗೆ ನುಗ್ಗಿದ್ದು ಈ ಎಲ್ಲಾ ಪ್ರಕರಣಗಳು "ಗುಜರಾತ್ ಮಾದರಿ" ಅಂದರೆ ಇದೆಯೇನು? ಎಂದು ಕೇಳಿದೆ.

“ಉತ್ತರ ಕೊಡಿ ಶಾ’... ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್

ಗೃಹ ಸಚಿವರೇ, 5600 ಕೋಟಿ ರೂ. ಜಿಎಸ್​ಟಿ ಬಾಕಿ, 2700 ಕೋಟಿ ರೂ. ಕುಡಿಯುವ ನೀರಿನ ಹಣ ಬಾಕಿ, ಭಾಗ್ಯಲಕ್ಷ್ಮಿ ಯೋಜನೆಯ 309 ಕೋಟಿ ರೂ., ಪ್ರಧಾನಮಂತ್ರಿ ಅವಾಸ್​​​​​ ಯೋಜನೆಯ 240 ಕೋಟಿ ರೂ., ವಸತಿ, ಶಿಕ್ಷಣ, ಶಿಶು ಅಭಿವೃದ್ಧಿ ಮುಂತಾದ ಯೋಜನೆಗಳ ಹಣವನ್ನು ಬಿಡುಗಡೆಗೊಳಿಸದೆ ಕೇಂದ್ರವು ಕರ್ನಾಟಕಕ್ಕೆ ವಂಚಿಸುತ್ತಿರುವುದೇಕೆ? ಉತ್ತರ ಕೊಡಿ ಅಮಿತ್ ಶಾ ಎಂದಿದೆ.

“ಉತ್ತರ ಕೊಡಿ ಶಾ’... ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್

ಮೌನವೇಕೆ?
ಭಯೋತ್ಪಾದಕ ದಾವಿಂದರ್ ಸಿಂಗ್ ಬಗ್ಗೆ ನಿಮ್ಮ ಹಾಗೂ ಪ್ರಧಾನಮಂತ್ರಿಯ ಮೌನವೇಕೆ?. ಪುಲ್ವಾಮಾ ದಾಳಿಯಲ್ಲಿ ದಾವಿಂದರ್ ಸಿಂಗ್ ಪಾತ್ರವೇನು? ಈತ ಇನ್ನೂ ಅದೆಷ್ಟು ಉಗ್ರರ ಜೊತೆ ಕೈಜೋಡಿಸಿದ್ದಾನೆ? ಈತನ ರಕ್ಷಣೆಗೆ ನಿಂತವರು ಯಾರು, ಏಕೆ? ದೇಶದ ಭದ್ರತೆಯ ಗಂಭೀರ ವಿಷಯದಲ್ಲಿ ಜನರಿಂದ ನೀವು ಏನನ್ನು ಮುಚ್ಚಿಡುತ್ತಿರುವಿರಿ? ಉತ್ತರ ಕೊಡಿ ಎಂದಿದೆ.

ಪೌರತ್ವ ತಿದ್ದುಪಡಿಯು ಡಾ. ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. 1955ರ ಕಾಯ್ದೆಯು ಪೌರತ್ವ ಹಾಗೂ ಆಶ್ರಯ ನೀಡುವುದರಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡುವುದಿಲ್ಲ. 2019ರ ತಿದ್ದುಪಡಿಯು ತಾರತಮ್ಯದಿಂದ ಕೂಡಿದ್ದು, ಪರಿಚ್ಚೇದ 14ರ ವಿರುದ್ಧವಾಗಿದೆ. ಸಂವಿಧಾನದ ಜೊತೆ ಚೆಲ್ಲಾಟವೇಕೆ? ಎಂದು ಉತ್ತರ ಕೇಳಿದೆ.

“ಉತ್ತರ ಕೊಡಿ ಶಾ’.......ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್

ಸರ್ವಾಧಿಕಾರಿ ಧೋರಣೆ ಏಕೆ?
ಸಿಎಎ/ಎನ್ಆರ್​ಸಿ ವಿರೋಧಿಸಿ ದೇಶಾದಾದ್ಯಂತ 1 ತಿಂಗಳಿಂದ ನಿರಂತರವಾಗಿ ಎಲ್ಲಾ ಜಾತಿ-ಧರ್ಮಗಳ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಜನಸಾಮಾನ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಜನಾಭಿಪ್ರಾಯದ ವಿರುದ್ಧ ಸರ್ವಾಧಿಕಾರಿ ಧೋರಣೆ ಏಕೆ? ಬಿಜೆಪಿಯು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಗೌರವಿಸುತ್ತಿಲ್ಲವೇಕೇ? ಎಂದಿದೆ.

“ಉತ್ತರ ಕೊಡಿ ಶಾ’.......ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್

ಸರ್ಕಾರ ಟೇಕ್ಆಫ್ ಆಗಿಲ್ಲ:
ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರವು ಟೇಕ್ ಆಫ್ ಆಗಿಲ್ಲ. ಬಿಜೆಪಿ-ಆರ್​ಎಸ್​ಎಸ್​​ ಕಿತ್ತಾಟ, ಮಂತ್ರಿ ಮಂಡಲ ರಚನೆಗೆ ನಿಮ್ಮ ತಡೆ ಮತ್ತು ದಬ್ಬಾಳಿಕೆ, ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರುಗಳ ಹೊಂದಾಣಿಕೆ ಕೊರತೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಗೊಳಿಸುತ್ತಿರುವುದೇಕೆ? ಎಂದು ಕೇಳಿದೆ.

ABOUT THE AUTHOR

...view details