ಬೆಂಗಳೂರು. ಹೆರೋಹಳ್ಳಿ ವಾರ್ಡ್ನ ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಮೃತನ ಪತ್ನಿ ಸುಮಾ ಮತ್ತು ಗೆಳತಿ ರೇಖಾ ಪರ -ವಿರೋಧದ ಸಾಕ್ಷ್ಯಾಧಾರಗಳು ದಿನಕ್ಕೊಂದರಂತೆ ಹೊರಬೀಳುತ್ತಿವೆ. ಮೇಲ್ನೋಟಕ್ಕೆ ಎಲ್ಲವೂ ಸತ್ಯದಂತೆ ಕಂಡರೂ ಹೊರ ಬರುತ್ತಿರುವ ಮಾಹಿತಿಯ ಅಸಲಿಯತ್ತು ಏನೂ ಅನ್ನೋದನ್ನ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿತೆ ರೇಖಾ ಜೈಲಿನಿಂದ ಜಾಮೀನು ಮೇರೆಗೆ ಹೊರಬರುವ ಹೊತ್ತಿನಲ್ಲಿ ಮತ್ತೊಂದು ವಾಟ್ಸ್ಆ್ಯಪ್ ಚಾಟ್ ರಿವೀಲ್ ಆಗಿದೆ. ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜೊತೆಗೆ ನಡೆಸಿದ್ದಾರೆ ಎನ್ನಲಾದ ವಾಟ್ಸ್ಆ್ಯಪ್ ಚಾಟಿಂಗ್ ರಿವೀಲ್ ಆಗಿದೆ. ಈ ವಾಟ್ಸ್ಆ್ಯಪ್ ಚಾಟಿಂಗ್ ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಆಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯುವುದಕ್ಕೂ ನಾನು ಸಿದ್ಧ ಅನ್ನೋ ರೀತಿ ರೇಖಾ ಮಾಡಲಾದ ಸಂದೇಶ ಎನ್ನುವ ಸ್ಕ್ರೀನ್ ಶಾಟ್ ಓಡಾಡ್ತಿವೆ.