ಕರ್ನಾಟಕ

karnataka

ETV Bharat / state

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತೊಂದು ಸಂಕಷ್ಟ... ಮುಂದಿನ ಟೆಂಡರ್​ಗೆ ಅಡ್ಡಿ? - indira canteen latest news

ಈಗಾಗಲೇ ಎಸಿಬಿ ತನಿಖೆ ಎದುರಿಸುತ್ತಿರುವ ಇಂದಿರಾ ಕ್ಯಾಂಟೀನ್​ ಗುತ್ತಿಗೆದಾರರ ವಿರುದ್ಧ ಪಾಲಿಕೆಯ ಹಣಕಾಸು ಜಂಟಿ ಆಯುಕ್ತ ವೆಂಕಟೇಶ್ ಕೂಡಾ ಎಫ್​ಐಆರ್ ದಾಖಲಿಸಿದ್ದು, ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಸುತ್ತಿರುವ ಚೆಫ್ ಟಾಕ್, ರಿವಾರ್ಡ್ಸ್ ಸಂಸ್ಥೆಗಳು ಸಂಕಷ್ಟ ಎದುರಿಸುವಂತಾಗಿದೆ.

Another problem for Indira Canteen contractors
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತೊಂದು ಸಂಕಷ್ಟ....ಮುಂದಿನ ಟೆಂಡರ್​ಗೆ ಅಡ್ಡಿ?

By

Published : Jan 22, 2020, 8:57 PM IST

ಬೆಂಗಳೂರು:ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಸುತ್ತಿರುವ ಚೆಫ್ ಟಾಕ್, ರಿವಾರ್ಡ್ಸ್ ಸಂಸ್ಥೆಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಎಸಿಬಿ ತನಿಖೆ ಎದುರಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಪಾಲಿಕೆಯ ಹಣಕಾಸು ಜಂಟಿ ಆಯುಕ್ತ ವೆಂಕಟೇಶ್ ಕೂಡಾ ಎಫ್​ಐಆರ್ ದಾಖಲಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತೊಂದು ಸಂಕಷ್ಟ....ಮುಂದಿನ ಟೆಂಡರ್​ಗೆ ಅಡ್ಡಿ?

ಗುತ್ತಿಗೆ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಸಬ್ಸಿಡಿ ಹಣ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಗರ ವಕ್ತಾರ ಎನ್.ಆರ್ ರಮೇಶ್, 2018 ರಲ್ಲೇ ದಾಖಲೆ ಸಹಿತ ಈ ಹಗರಣವನ್ನು ಬಯಲು ಮಾಡಿದ್ದೆ. ಎರಡೂ ಗುತ್ತಿಗೆ ಸಂಸ್ಥೆಗಳು ನೀಡಿರುವ ಲೆಕ್ಕಚಾರದ ಪ್ರಕಾರ, 175 ಇಂದಿರಾ ಕ್ಯಾಂಟೀನ್ ಹಾಗೂ ಹದಿನೈದು ಮೊಬೈಲ್ ಕ್ಯಾಂಟೀನ್​ಗಳು 62,70,000 ಜನ ಊಟ, ಉಪಹಾರ ಮಾಡುತ್ತಾರೆ ಎಂಬ ತಪ್ಪು ಲೆಕ್ಕ ಕೊಟ್ಟಿದ್ದಾರೆ ಎಂದರು.

ಪ್ರತೀ ತಿಂಗಳು ಆರು ಕೋಟಿ ಎಂಬತ್ಮೂರು ಲಕ್ಷ ರೂಪಾಯಿ ಸಬ್ಸಿಡಿ ಹಣ ಲೂಟಿ ಮಾಡುತ್ತಿದ್ದಾರೆ. ಈ ದಾಖಲೆಗಳ ಪ್ರಕಾರ, ಸಿ.ಎಂ ಹಗರಣವನ್ನು ತನಿಖೆಗೆ ವಹಿಸಿದ್ದು, ಎಸಿಬಿ ತನಿಖೆಯಿಂದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವ ನಿರೀಕ್ಷೆಯಿದೆ ಎಂದರು.

ಕೆಲವು ಕ್ಯಾಂಟೀನ್​ಗಳಲ್ಲಿ ಐದಾರು ಜನರೂ ಸಹ ಊಟ ಮಾಡುತ್ತಿಲ್ಲ. ಆದ್ರೆ 1,400 ಜನರ ಊಟದ ಲೆಕ್ಕ ಕೊಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಎಫ್ ಐಆರ್ ದಾಖಲಾಗಿರುವುದು ಸ್ವಾಗತಾರ್ಹ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಈ ಹಿಂದೆಯೇ ನಡೆಸಿದ ತನಿಖೆಯಲ್ಲಿ ಏನೂ ಸಿಗಲಿಲ್ಲ. ಇದೀಗ ಇಂದಿರಾ ಕ್ಯಾಂಟೀನ್​ನನ್ನು ಮುಚ್ಚಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ಬಡವರು ನೆಮ್ಮದಿಯ ಊಟ ಮಾಡದಂತೆ ಸರ್ಕಾರ ಮಾಡ್ತಿದೆ ಎಂದರು.


ಇನ್ನು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಪ್ರತಿಕ್ರಿಯಿಸಿ, ಮೂರು ತಿಂಗಳಿಂದ ಎಸಿಬಿ ತನಿಖೆಗೆ ಸಹಕರಿಸಿ ದಾಖಲೆಗಳನ್ನು ನೀಡಿದ್ದೇವೆ. ಎಲ್ಲ ಲೆಕ್ಕಗಳು ಟ್ಯಾಪ್​ ಆಗ್ತಿವೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿರುವುದು ಗೊಂದಲ ಮೂಡಿಸಿದ್ದು, ಹೊಸ ಟೆಂಡರ್​ನಲ್ಲಿ ಭಾಗವಹಿಸದಂತೆ ಮಾಡುವ ಕಾರಣಕ್ಕೆ ಈ ರೀತಿಯಾಗ್ತಿರಬಹುದು ಎಂದು ತಿಳಿಸಿದರು.

ABOUT THE AUTHOR

...view details