ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ಅರೋಪಿ ಎಸ್ಡಿಪಿಐ ಕಾರ್ಯಕರ್ತನನ್ನು ಅರೆಸ್ಟ್ ಮಾಡುವಲ್ಲಿ ತಡರಾತ್ರಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗಲಭೆಯ ಪ್ರಮುಖ ಆರೋಪಿ ಅರೆಸ್ಟ್: ರಾಜಕಾರಣಿಗಳೊಂದಿಗಿನ ನಂಟು, ತೀವ್ರಗೊಂಡ ವಿಚಾರಣೆ!! - ಡಿಜೆ ಹಳ್ಳಿ ಪೊಲೀಸರು
ಠಾಣೆ ಬಳಿ ಬೆಂಕಿ , ಶಾಸಕನ ಮನೆ ಬಳಿ ಗಲಭೆ, ನವೀನ್ ಮನೆಗೆ ಬೆಂಕಿ ಹಾಕುವುದರಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪ್ರಮುಖ ಆರೋಪಿಯನ್ನ ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಎಸ್ಡಿಪಿಐ ಕಾರ್ಯಕರ್ತ ಖಾಲೀದ್ ಎಂಬಾತನೇ ಬಂಧಿತ ಆರೋಪಿ. ಡಿಜೆ ಹಳ್ಳಿಯ ರೋಷನ್ ನಗರ ನಿವಾಸಿಯಾಗಿದ್ದ ಖಾಲೀದ್ ಸಂಘಟನೆಯ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡಿದ್ದ. ಕೃತ್ಯದಲ್ಲಿ ಮುಜಾಮಿಲ್, ಅಯಾಜ್ , ಆಫ್ನಾನ್ ಜೊತೆಗೂಡಿ ಕೃತ್ಯ ಎಸಗಿದ್ದ. ಅಷ್ಟು ಮಾತ್ರವಲ್ಲದೇ ಠಾಣೆ ಬಳಿ ಬೆಂಕಿ , ಶಾಸಕನ ಮನೆ ಬಳಿ ಗಲಭೆ, ನವೀನ್ ಮನೆಗೆ ಬೆಂಕಿ ಹಾಕುವುದರಲ್ಲಿ ಮಹತ್ತರ ಪಾತ್ರ ವಹಿಸಿದ್ದ.
ಆರೋಪಿಯನ್ನು ಪೊಲೀಸರು ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಖಾಲೀದ್ ಜೊತೆ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕದಲ್ಲಿರುವ ಮಾಹಿತಿ ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿದೆ. ಸದ್ಯ ಖಾಲೀದ್ನನ್ನು ಡಿಜೆ ಹಳ್ಳಿ ಠಾಣಾ ಹಿರಿಯಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.